ಮಂಗಳವಾರ, ನವೆಂಬರ್ 19, 2019
29 °C
ವಿಧಾನಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಅಂತ್ಯ

6 ನಾಮಪತ್ರ ತಿರಸ್ಕೃತ: 24 ಪಕ್ಷೇತರರು ಕಣದಲ್ಲಿ

Published:
Updated:

ಯಾದಗಿರಿ: ವಿಧಾನಸಭೆ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, ಒಟ್ಟು 6 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇದರಿಂದಾಗಿ 86 ನಾಮಪತ್ರಗಳು ಕ್ರಮಬದ್ಧವಾಗಿದ್ದು, 24 ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.ಸುರಪುರ ಕ್ಷೇತ್ರದಲ್ಲಿ ಒಂದು ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಐದು ನಾಮಪತ್ರಗಳನ್ನು ತಿರಸ್ಕೃರಿಸಲಾಗಿದೆ. ಬಿಜೆಪಿಯ 5, ಕಾಂಗ್ರೆಸ್‌ನ ನಾಲ್ಕು, ಜೆಡಿಎಸ್‌ನ 5, ಕೆಜೆಪಿಯ ನಾಲ್ಕು, ಬಿಎಸ್ಸಾರ್ ಕಾಂಗ್ರೆಸ್‌ನ ನಾಲ್ಕು, ಬಿಎಸ್ಪಿಯ 3 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾ ವಿಭಾಗ ತಿಳಿಸಿದೆ.ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿಯ ಗಿರೀಶ ಮಟ್ಟೆಣ್ಣವರ, ಜೆಡಿಎಸ್‌ನ ನಾಗನಗೌಡ ಕಂದಕೂರ, ಶರಣಗೌಡ ಕಂದಕೂರ, ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ, ಕೆಜೆಪಿಯ ವೆಂಕಟರಡ್ಡಿ ಮುದ್ನಾಳ, ಬಿಎಸ್ಸಾರ್ ಕಾಂಗ್ರೆಸ್‌ನ ಬಾಬು ಚವ್ಹಾಣ, ಬಿಎಸ್ಪಿಯ ಸಿದ್ಧಪ್ಪ, ಲೋಕ ಜನಶಕ್ತಿ ಪಕ್ಷದ ಡಾ. ದೇವಾನಂದ ಕೋಲಿ, ಸಮಾಜವಾದಿ ಪಕ್ಷದ ಸತ್ಯನಾರಾಯಣ ಯಾದವ, ಕರ್ನಾಟಕ ಮಕ್ಕಳ ಪಕ್ಷದ ಸಂಜೀವಕುಮಾರ, ಪಕ್ಷೇತರ ಅಭ್ಯರ್ಥಿಗಳಾದ ಅನಿಲಕುಮಾರ, ಅಮರೇಶ್ವರ ರಾಠೋಡ, ಪಿ. ಕನ್ನಯ್ಯ, ಕೃಷ್ಣ, ಚಂದ್ರಶೇಖರ ದಾಸನಕೇರಿ, ಮಲ್ಲಿಕಾರ್ಜುನ ಕಾಂತಿಮನಿ, ಶರಣಪ್ಪ, ಶಾಲಿನಿ ಕೋರಿ, ಶೇಖ್ ಮೆಹಮೂಬ, ಸಾಬಣ್ಣ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ.ಶಹಾಪುರ ಮತಕ್ಷೇತ್ರದಲ್ಲಿ ಬಿಜೆಪಿಯ ಮಲ್ಲಿಕಾರ್ಜುನ, ವೀರನಗೌಡ ಮಲ್ಲಾಬಾದಿ, ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪೂರ, ಜೆಡಿಎಸ್‌ನ ಶರಣಪ್ಪ ಸಲಾದಪೂರ, ಬಿಎಸ್ಪಿಯ ಮಹ್ಮದ್ ಅನ್ವರ್ ಪಾಷಾ, ಕೆಜೆಪಿಯ ಗುರು ಪಾಟೀಲ ಶಿರವಾಳ, ಬಿಎಸ್ಸಾರ್ ಕಾಂಗ್ರೆಸ್‌ನ ಶಂಕ್ರಣ್ಣ ವಣಿಕ್ಯಾಳ, ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬಗೌಡ, ಅಮರಣ್ಣ, ಬಸವರಾಜ ಪಡಕೋಟೆ, ಭೀಮಾಶಂಕರ ಆಲ್ದಾಳ, ಮಹಾದೇವಪ್ಪ ಸೇರಿದಂತೆ 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.ಯಾದಗಿರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ. ಎ.ಬಿ. ಮಾಲಕರಡ್ಡಿ, ಜೆಡಿಎಸ್‌ನ ಎ.ಸಿ. ಕಾಡ್ಲೂರ, ಬಿಜೆಪಿಯ ಚಂದ್ರಶೇಖರ ಮಾಗನೂರ, ಬಿಎಸ್ಪಿಯ ಬಸವರಾಜ, ಬಿಎಸ್ಸಾರ್ ಕಾಂಗ್ರೆಸ್‌ನ ಮೌಲಾಲಿ ಅನಪೂರ, ಕೆಜೆಪಿಯ ಡಾ. ವೀರಬಸವಂತರಡ್ಡಿ ಮುದ್ನಾಳ, ಪಕ್ಷೇತರ ಅಭ್ಯರ್ಥಿಗಳಾದ ಅನಂತರಡ್ಡಿ, ಜಲಂಧರರಾವ ಮುಂಡರಗಿ, ಬಸವರಾಜ, ಶೇಖ ಜಹೀರುದ್ದೀನ್, ಸಿದ್ರಾಮಪ್ಪ ಸೇರಿದಂತೆ 11 ಅಭ್ಯರ್ಥಿಗಳ ನಾಮಪತ್ರಗಳ ಕ್ರಮ ಬದ್ಧವಾಗಿವೆ.ಸುರಪುರ ಕ್ಷೇತ್ರದಲ್ಲಿ ಜೆಡಿಎಸ್‌ನ ನರಸಿಂಹ ನಾಯಕ (ರಾಜುಗೌಡ), ಬಿಜೆಪಿಯ ರಾಜಾ ಮದನಗೋಪಾಲ ನಾಯಕ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ, ಬಿಎಸ್ಸಾರ್ ಕಾಂಗ್ರೆಸ್‌ನ ನಂದಕುಮಾರ ಮಾಲಿಪಾಟೀಲ, ಜೆಡಿಯುದ ರಾಮಲಿಂಗಪ್ಪ, ಕೆಜೆಪಿಯ ಶಿವರಾಜ ಮಲ್ಲೇಶಿ, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ನಾಯಕ, ಪ್ರಭುಲಿಂಗ ಸಿದ್ಧಾಪುರ, ಬಸವರಾಜ, ರಾಮನಗೌಡ ಭೀಮರಾಯಗೌಡ 10 ಅಭ್ಯರ್ಥಿ ನಾಮಪತ್ರಗಳು ಕ್ರಮಬದ್ಧವಾಗಿವೆ.ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಏಪ್ರಿಲ್ 20 ಕೊನೆಯ ದಿನವಾಗಿದ್ದು, ನಂತರವಷ್ಟೇ ಎಲ್ಲ ಕ್ಷೇತ್ರಗಳ ಚಿತ್ರಣ ಸ್ಪಷ್ಟವಾಗಲಿದೆ. ಬಿರುಸಿನ ಪ್ರಚಾರ ಆರಂಭಿಸಿದ್ದು, ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಚುನಾವಣೆಯ ಕಾವು ತೀವ್ರಗೊಂಡಿದೆ.

ಪ್ರತಿಕ್ರಿಯಿಸಿ (+)