ಶನಿವಾರ, ಮಾರ್ಚ್ 6, 2021
19 °C
ಹಳ್ಳ, ಕೊಳ್ಳಗಳಲ್ಲಿ ಬಿದ್ದ ತ್ಯಾಜ್ಯ ವಿಲೇವಾರಿಗೆ ಮಾಲೀಕರ ಸಾಥ್‌

60 ಗ್ರಾನೈಟ್‌ ಘಟಕಕ್ಕೆ ಬೀಗಮುದ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

60 ಗ್ರಾನೈಟ್‌ ಘಟಕಕ್ಕೆ ಬೀಗಮುದ್ರೆ

ಇಳಕಲ್‌: ಪರಿಸರ ಮಾಲಿನ್ಯಕ್ಕೆ ಕಾರಣವಾದ 197 ಗ್ರಾನೈಟ್‌ ಪಾಲಿಶಿಂಗ್‌ ಹಾಗೂ ಕಟಿಂಗ್‌ ಘಟಕಗಳನ್ನು ಮುಚ್ಚುವ ಕಾರ್ಯಾಚರಣೆ ಶುಕ್ರವಾರ ಮುಂದುವರೆದಿದ್ದು, 60 ಫ್ಯಾಕ್ಟರಿಗಳಿಗೆ ಬೀಗ ಹಾಕಲಾಗಿದೆ. ಗುರುವಾರ 12 ಘಟಕಗಳಿಗೆ ಬೀಗ ಮುದ್ರೆ ಹಾಕಲಾಗಿತ್ತು.ಇನ್ನೊಂದೆಡೆ ಗ್ರಾನೈಟ್‌ ಘಟಕಗಳ ಮಾಲೀಕರ ಸಂಘದಿಂದ ಹಳ್ಳ, ಕೊಳ್ಳಗಳಲ್ಲಿ ಹಾಕಲಾಗಿರುವ ಗ್ರಾನೈಟ್‌ ತ್ಯಾಜ್ಯ (ಮಡ್ಡು) ತೆರವುಗೊಳಿಸುವ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಗುರುಮಹಾಂತ ಸ್ವಾಮೀಜಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಗ್ರಾನೈಟ್‌ ಘಟಕಗಳ ಮಾಲೀಕರು ಕೈಗೊಂಡಿರುವ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಗುರುಲಿಂಗಪ್ಪ ಕಾಲೊನಿಯಿಂದ ಗಾಯತ್ರಿ ಗ್ರಾನೈಟ್‌ ಘಟಕದವರೆಗಿನ ಎರಿಹಳ್ಳವನ್ನು ಸ್ವಚ್ಛಗೊಳಿಸಲಾಗುತ್ತಿದೆ.ಅಲ್ಲಿಗೆ ಕೂಗಳತೆ ದೂರದಲ್ಲಿ ಇರುವ ವೀರಮಣಿ ಕ್ರೀಡಾಂಗಣದ ಹತ್ತಿರದ ಗ್ರಾನೈಟ್‌ ಘಟಕಕ್ಕೆ ಬೀಗ ಮುದ್ರೆ ಹಾಕುವ ಕಾರ್ಯವನ್ನು ತಹಶೀಲ್ದಾರ್‌ ಎಸ್‌.ಎಸ್‌. ಸಂಪಗಾವಿ ನೇತೃತ್ವದಲ್ಲಿ ವಿವಿಧ ಇಲಾಖೆಯ ಸಿಬ್ಬಂದಿ ಮುಂದುವರೆಸಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನ ವರ, ‘ಗ್ರಾನೈಟ್‌ ಉದ್ಯಮದ ಭವಿಷ್ಯ ಹಾಗೂ ನಾಗರಿಕರ ಆರೋಗ್ಯದ ದೃಷ್ಟಿ ಯಿಂದ, ಗ್ರಾನೈಟ್‌ ಘಟಕಗಳ ಮಾಲೀ ಕರು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿ ರುವುದು ಶ್ಲಾಘನೀಯ’ ಎಂದರು.ಗುರು ಮಹಾಂತ ಸ್ವಾಮೀಜಿ ಮಾತನಾಡಿ, ‘ಹಳ್ಳ, ಕೊಳ್ಳಗಳಲ್ಲಿ ಈ ಹಿಂದೆ ಹಾಕಲಾಗಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಮುಂದಾಗಿರುವ ಗ್ರಾನೈಟ್‌ ಘಟಕಗಳ ಮಾಲೀಕರ ನಡೆ ಮೆಚ್ಚುಗೆಗೆ ಅರ್ಹ’ ಎಂದರು. ಮುಖ್ಯಮಂತ್ರಿ ಗಮನಕ್ಕೆ:  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ತಂಗಡಗಿಗೆ ಭೇಟಿ ನೀಡಿದ್ದಾಗ ಉತ್ತರ ಕರ್ನಾಟಕ ಔದ್ಯೋಗಿಕವಾಗಿ ಹಿಂದುಳಿದಿರುವ ಬಗ್ಗೆ, ಸರ್ಕಾರದ ಬೆಂಬಲವಿಲ್ಲದೇ ಆರಂಭವಾಗಿರುವ ಗ್ರಾನೈಟ್‌ ಉದ್ಯಮವು ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಕುರಿತು ಹಾಗೂ ಈಗ ಕಾನೂನಾತ್ಮಕ ತೊಡಕುಗಳಿಂದ ಗ್ರಾನೈಟ್‌ ಉದ್ಯಮಕ್ಕೆ ಹಿನ್ನಡೆ ಆಗಿರುವ ಬಗ್ಗೆ ಗಮನ ಸೆಳೆದಿದ್ದೇನೆ’ ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು.

‘ಗ್ರಾನೈಟ್‌ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶ ದಲ್ಲಿ ಸದನದ ಗಮನಸೆಳೆಯುತ್ತೇನೆ’ ಎಂದರು. ಈ ಸಂದರ್ಭದಲ್ಲಿ ಗ್ರಾನೈಟ್‌ ಉದ್ಯಮಿಗಳು ಸರ್ಕಾರ ಹಾಗೂ ಅಧಿ ಕಾರಿಗಳಿಂದ ಆಗುತ್ತಿರುವ  ತೊಂದರೆ ಗಳನ್ನು ಶಾಸಕರ ಗಮನಕ್ಕೆ ತಂದು, ಸಮಸ್ಯೆಗಳನ್ನು ಬಗೆಹರಿಸುವಂತೆ ವಿನಂತಿಸಿದರು. ಲೋಪ ಸರಿಪಡಿಸಲಾಗುವುದು: ‘ಗ್ರಾನೈಟ್‌ ಉದ್ಯಮಿಗಳು ಉದ್ದೇಶ ಪೂರ್ವಕವಾಗಿ ಪರಿಸರ ಹಾಳು ಮಾಡಿ ಲ್ಲ. ಆದರೆ, ಕೆಲವರ ನಿಷ್ಕಾಳಜಿಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಆಗಿರುವ ತಪ್ಪನ್ನು ಸರಿಪಡಿಸುವ ಕೆಲಸವನ್ನು ಸದ್ಯದಲ್ಲಿಯೇ ಆರಂಭಿಸುತ್ತೇವೆ’ ಎಂದು ಗ್ರಾನೈಟ್‌ ಘಟಕಗಳ ಮಾಲೀಕರ ಸಂಘದ ದಾಮೋದರ ಡಾಗಾ ಭರವಸೆ ನೀಡಿದರು.ಗ್ರಾನೈಟ್‌ ಘಟಕಗಳ ಮಾಲೀಕರ ಸಂಘ ಹಾಗೂ ಜನಜಾಗೃತಿ ವೇದಿಕೆಯ ಪ್ರಮುಖರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಗ್ರಾನೈಟ್‌ ಘಟಕಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಜನಜಾಗೃತಿ ವೇದಿಕೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದರಿಂದ ಈ ಸುದ್ದಿಗೋಷ್ಠಿ ಕುತೂಹಲ ಕೆರಳಿಸಿತ್ತು.‘ಹಿಂದೆ ರಿಲಾಯನ್ಸ್‌ ಪಂಪ್‌ ಹತ್ತಿರ ಹಾಗೂ ಹಿರೇಹಳ್ಳದ ಅನೇಕ ಕಡೆ ಈಗಾಗಲೇ ತ್ಯಾಜ್ಯ ತೆಗೆದು ಸ್ವಚ್ಛ ಮಾಡಲಾಗಿದೆ. ಆದರೆ, ನಮ್ಮ ಕಾರ್ಯ ಉಪವಿಭಾಗಾಧಿಕಾರಿಗಳಿಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತೃಪ್ತಿಯಾಗಿಲ್ಲ.ಗ್ರಾನೈಟ್‌ ಉದ್ಯಮದ ಮೇಲೆ ಅವಲಂಬಿತ ವಾಗಿರುವ 10 ಸಾವಿರಕ್ಕೂ ಹೆಚ್ಚು ಜನರು ಕಷ್ಟದಲ್ಲಿದ್ದಾರೆ. ಇಳಕಲ್‌ ನಗರದ ವಾಣಿಜ್ಯ ವಹಿವಾಟಿನ ಮೇಲೆ ದುಷ್ಪರಿ ಣಾಮವಾಗಿದೆ. ಈಗ ಮತ್ತೊಮ್ಮೆ ಸ್ವಚ್ಛತೆ ಕಾರ್ಯ ಆರಂಭ ಮಾಡುತ್ತಿದ್ದು,  ನಗರ ದ ಸಂಘ–ಸಂಸ್ಥೆಗಳು ಸಹಕರಿಸ ಬೇಕು’ ಎಂದು ಡಾಗಾ ಮನವಿ ಮಾಡಿದರು.ಜನಜಾಗೃತಿ ವೇದಿಕೆಯ ಯಲ್ಲಪ್ಪ ಪೂಜಾರಿ ಮಾತನಾಡಿ, ‘ಪರಿಸರ ಮಾಲಿನ್ಯ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಗುರು ಮಹಾಂತ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಲ್ಲರೂ ಸೇರಿ ತ್ಯಾಜ್ಯ ತಗೆದು ಹಳ್ಳ, ಕೊಳ್ಳಗಳನ್ನು ಸ್ವಚ್ಛ ಮಾಡಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಗಮನಸೆಳೆಯೋಣ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.