ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ನಗರಗಳಲ್ಲಿ ಮೊಬೈಲ್ ಸೇವೆ ರದ್ದು

ಮಿಲಾದ್ ಉನ್ ನಬಿ ಹಿನ್ನೆಲೆ: ಗಲಭೆ ತಡೆಗೆ ಪಾಕ್ ಕ್ರಮ
Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನ (ಮಿಲಾದ್ ಉನ್ ನಬಿ) ಆಚರಣೆ ವೇಳೆ ದೇಶದಲ್ಲಿ ನಡೆಯಬಹುದಾದ ಭಯೋತ್ಪಾದನಾ ದಾಳಿಗಳನ್ನು ತಡೆಯುವ ಸಲುವಾಗಿ ಪಾಕಿಸ್ತಾನದ 60 ಪಟ್ಟಣಗಳು ಮತ್ತು ನಗರಗಳಲ್ಲಿ ಮೊಬೈಲ್ ಸೇವೆ ರದ್ದುಗೊಳಿಸಲಾಗಿದೆ.

ಲಾಹೋರ್, ರಾವಲ್ಪಿಂಡಿ, ಮುಲ್ತಾನ್, ಕರಾಚಿ, ಹೈದರಾಬಾದ್, ಪೆಶಾವರ , ಕ್ವೆಟ್ಟಾ ಮತ್ತಿತರ ನಗರಗಳಲ್ಲಿ ಮೊಬೈಲ್ ಪೋನ್ ಸೇವೆಯನ್ನು ರದ್ದುಗೊಳಿಸಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಆದೇಶ ಹೊರಡಿಸಿದೆ.

ಅಲ್ಲದೆ, ಭಯೋತ್ಪಾದಕರು ದ್ವಿಚಕ್ರ ವಾಹನಗಳನ್ನು ಬಳಸಿ ದಾಳಿ ನಡೆಸುವುದರಿಂದ ದೇಶದ ಹಲವು ಸ್ಥಳಗಳಲ್ಲಿ ದ್ವಿಚಕ್ರ ವಾಹನ ಮತ್ತು ಸೈಕಲ್ ರಿಕ್ಷಾಗಳ ಓಡಾಟವನ್ನು ಸಹ  ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಾದ್ ಉನ್ ನಬಿ ಆಚರಣೆಯ ದಿನದಂದು ದೇಶದ ಪ್ರಮುಖ ಪಟ್ಟಣ ಮತ್ತು ನಗರಗಳಲ್ಲಿ ಮೊಬೈಲ್ ಪೋನ್ ಸೇವೆಯನ್ನು ರದ್ದುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ  ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲೀಕ್ ಅವರು, `ಸಂಪರ್ಕ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನಾಗಿ ಭಯೋತ್ಪಾದಕರು ಮೊಬೈಲ್ ಪೋನ್‌ಗಳನ್ನು ಬಳಸುತ್ತಾರೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT