ಸೋಮವಾರ, ಜೂನ್ 14, 2021
24 °C
ಶಿಶಿಲ, ಶಿರಾಡಿ ರಕ್ಷಿತಾರಣ್ಯದಲ್ಲಿ ಬೆಂಕಿ

600ಕ್ಕೂ ಅಧಿಕ ಎಕರೆ ಕಾಡು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ): ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಬರುವ ಶಿಶಿಲ, ಶಿಬಾಜೆ ಮತ್ತು ಶಿರಾಡಿ ರಕ್ಷಿತಾರಣ್ಯದಲ್ಲಿ ನಾಲ್ಕು ದಿನ­ಗಳಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಸುಮಾರು 600 ಎಕರೆಯಷ್ಟು ಅರಣ್ಯ ಈಗಾಗಲೇ ಭಸ್ಮವಾಗಿದೆ. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.ದಟ್ಟ ಮರಗಳಿಂದ ಮರೆಯಾಗಿದ್ದ ಬೆಟ್ಟ, ಗುಡ್ಡಗಳು ಉರಿದು ಹೋಗಿ ಕಲ್ಲು ಬಂಡೆಗಳು ಮಾತ್ರ ಕಾಣ­ಲಾ­ರಂಭಿಸಿವೆ. ಸದಾ ಹಸಿರು, ಮರಗಳಿಂದ ಕಂಗೊಳಿ­ಸುತ್ತಿದ್ದ ಶಿಶಿಲದ ಚಿಂಗಾಣಿಗುಡ್ಡೆ ತನ್ನ ಸೌಂದರ್ಯವನ್ನು ಸಂಪೂರ್ಣ ಕಳೆದು­ಕೊಂಡು ಬಯ­ಲಾ­ಗಿದೆ. ಪಕ್ಷಿ­ಗಳು, ಪ್ರಾಣಿ ಸಂಕುಲ ಬೆಂಕಿ­ಯಿಂದ ಕಂಗೆಟ್ಟಿವೆ.ಶನಿವಾರ ರಾತ್ರಿ ಗುಂಪಕಲ್ಲು ಭಾಗದಿಂದ ಕಾಣಿಸಿಕೊಂಡ ಬೆಂಕಿ ತನ್ನ ಕೆನ್ನಾ­ಲಗೆಯನ್ನು ವಿಸ್ತರವಾಗಿ ಹರ­ಡುತ್ತಾ ಬಂದು ಚಿಂಗಾಣಿಗುಡ್ಡೆ, ಪಿಜಿನ­ಪಾದೆ, ಮೀಯಾರು, ಬೂಡದಮಕ್ಕಿ, ಪಡಂತಾಜೆಪ್ರದೇಶವನ್ನು ಆವರಿ­ಕೊಂಡು ಸುಟ್ಟು ಹಾಕಿದೆ. ಕಾಳ್ಗಿಚ್ಚು ವ್ಯಾಪಿ­ಸುತ್ತಿದ್ದರೂ ಅರಣ್ಯ ಇಲಾಖೆ ಬೆಂಕಿ ನಂದಿಸಲು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.