ಮಂಗಳವಾರ, ನವೆಂಬರ್ 19, 2019
28 °C
ವಿಧಾನಸಭಾ ಚುನಾವಣೆ: ಜಿಲ್ಲೆಯ 7ಕ್ಷೇತ್ರಗಳ ನೊಟ

61 ಅಭ್ಯರ್ಥಿಗಳಿಂದ 102 ನಾಮಪತ್ರ ಸಲ್ಲಿಕೆ

Published:
Updated:

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಜಿಲ್ಲೆಯ 7ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ ಒಟ್ಟು 61 ಅಭ್ಯರ್ಥಿಗಳಿಂದ 102 ನಾಮಪತ್ರಗಳು ಸಲ್ಲಿಕೆ ಆಗಿವೆ.ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಒಂದು, ಸ್ವತಂತ್ರ ಅಭ್ಯರ್ಥಿಗಳಿಂದ ಮೂರು, ಎನ್‌ಸಿಪಿ ಪಕ್ಷದಿಂದ ಒಂದು ಹಾಗೂ ಜೆಡಿಯುನಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 6 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆ ಆಗಿವೆ.ಭದ್ರಾವತಿ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ 1, ಸಿಪಿಐನಿಂದ 1, ಕಾಂಗ್ರೆಸ್ - 1, ಕೆಜೆಪಿ -1, ಲೋಕಸತ್ತಾ -1 ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ 10 ನಾಮಪತ್ರಗಳು ಹಾಗೂ ಬಿಎಸ್‌ಆರ್‌ನಿಂದ 1 ಉಮೇದುವಾರಿಕೆ ಸಲ್ಲಿಕೆ ಆಗಿದ್ದು, ಒಟ್ಟು 15 ಅಭ್ಯರ್ಥಿಗಳಿಂದ 16 ನಾಮಪತ್ರಗಳು ಸಲ್ಲಿಕೆ ಆಗಿವೆ.ಶಿವಮೊಗ್ಗ ನಗರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಿಂದ ಒಟ್ಟು 22 ನಾಮಪತ್ರಗಳು ಸಲ್ಲಿಕೆ ಆಗಿದ್ದು, ವಿವರ ಇಂತಿದೆ. ಬಿಜೆಪಿಯಿಂದ 4, ಜೆಡಿಎಸ್‌ನಿಂದ 4, ಎಸ್‌ಡಿಪಿಐ ಪಕ್ಷದಿಂದ 1, ಸ್ವತಂತ್ರ ಅಭ್ಯರ್ಥಿಗಳಿಂದ 8, ಬಿಎಸ್‌ಆರ್ ಕಾಂಗ್ರೆಸ್‌ನಿಂದ 2 ಮತ್ತು ಲೋಕಸತ್ತಾ ಪಕ್ಷದಿಂದ 1 ಹಾಗೂ ಜೆಡಿಯುನಿಂದ 1 ನಾಮಪತ್ರ ಸಲ್ಲಿಕೆ ಆಗಿದೆ. ಇನ್ನು ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ 4, ಕಾಂಗ್ರೆಸ್‌ನಿಂದ 4, ಜೆಡಿಎಸ್‌ನಿಂದ 1, ಕೆಜೆಪಿಯಿಂದ 2, ಲೋಕಸತ್ತಾ ಪಕ್ಷದಿಂದ 1 ಮತ್ತು ಜೆಡಿಯುನಿಂದ 2 ನಾಮಪತ್ರಗಳು ಸಲ್ಲಿಕೆ ಆಗಿದ್ದು, ಒಟ್ಟು 7 ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆ ಆಗಿವೆ.

ಶಿಕಾರಿಪುರದಲ್ಲಿ ಬಿಎಸ್‌ಪಿಯಿಂದ 1, ಬಿಜೆಪಿಯಿಂದ 4, ಕಾಂಗ್ರೆಸ್‌ನಿಂದ 2, ಜೆಡಿಎಸ್‌ನಿಂದ 1 ಹಾಗೂಸ್ವತಂತ್ರ ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆ ಆಗಿದ್ದು,ಒಟ್ಟು 6 ಅಭ್ಯರ್ಥಿಗಳಿಂದ 14 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.ಸೊರಬದಲ್ಲಿ ಬಿಎಸ್‌ಪಿಯಿಂದ 1, ಬಿಜೆಪಿಯಿಂದ 4, ಕಾಂಗ್ರೆಸ್‌ನಿಂದ 3, ಜೆಡಿಎಸ್‌ನಿಂದ 4, ಕೆಜೆಪಿಯಿಂದ 3 ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ 5 ನಾಮಪತ್ರಗಳು ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಜೆಡಿಯುನಿಂದ ತಲಾ 2 ಉಮೇದುವಾರಿಕೆಗಳು ಸಲ್ಲಿಕೆ ಆಗಿವೆ. ಒಟ್ಟಾರೆಯಾಗಿ 12 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆ ಆಗಿವೆ.ಕೊನೆಯದಾಗಿ ಸಾಗರ ಕ್ಷೇತ್ರದಿಂದ ಬಿಎಸ್‌ಪಿ, ಕೆಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಿಂದ ತಲಾ ಒಂದು ಉಮೇದುವಾರಿಕೆ ಸಲ್ಲಿಕೆ ಆಗಿದ್ದು, ಒಟ್ಟು 4 ನಾಮಪತ್ರಗಳು ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)