62 ಮಂದಿಗೆ ವಸತಿ ಯೋಜನೆ ಚೆಕ್ ವಿತರಣೆ

7

62 ಮಂದಿಗೆ ವಸತಿ ಯೋಜನೆ ಚೆಕ್ ವಿತರಣೆ

Published:
Updated:

ಶ್ರೀರಂಗಪಟ್ಟಣ: ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ವಾಸಿಸುವ ಬಡ ಜನರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು 62 ಮಂದಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ತಲಾ ರೂ.20 ಸಾವಿರ ಮೊತ್ತದ ಚೆಕ್ ಅನ್ನು ಸೋಮವಾರ ವಿತರಿಸಿದರು. ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ವಿತರಣೆ ನಡೆಯಿತು. ನಂತರ ಮಾತನಾಡಿದ ಅವರು, ಬಡ ಜನರಿಗೆ ಸೂರು ಒದಗಿಸಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಸಹಾಯಧನ ನೀಡುತ್ತಿದೆ. ಇದರ ಜತೆಗೆ ಬ್ಯಾಂಕ್ ಕೂಡ ಸಾಲದ ರೂಪದಲ್ಲಿ ಸಹಾಯ ಒದಗಿಸುತ್ತಿವೆ. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಬ್ಯಾಂಕ್ ಸಾಲವನ್ನು ನಿಗದಿತ ಅವಧಿಯಲ್ಲಿ ತೀರಿಸಿ ಋಣ ಮುಕ್ತರಾಗಬೇಕು ಎಂದು ಹೇಳಿದರು.  ಮುಖ್ಯಾಧಿಕಾರಿ ರಾಜಣ್ಣ ಮಾತನಾಡಿ, ಶೇ.22.75 ಹಾಗೂ ಶೇ.7.25 ಯೋಜನೆಯಡಿಯಲ್ಲಿ ಮೀಸಲಿರಿಸಿದ್ದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿದೆ. ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ನಿರುದ್ಯೋಗಿಗಳಿಗೆ ತಲಾ ರೂ.1.2 ಲಕ್ಷ ಸಾಲ ಸೌಲಭ್ಯ ಒದಗಿಸಲಾಗಿದೆ.

 

ಕೆನರಾ ಬ್ಯಾಂಕ್ ಈ ಸಾಲ ಒದಗಿಸಿದ್ದು ನಿಗದಿತ ಅವಧಿಯಲ್ಲಿ ತೀರುವಳಿ ಮಾಡುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಶಿವಾಜಿರಾವ್, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಎಂ.ಎಲ್. ದಿನೇಶ್, ಜಯರಾಂ, ರಾಮೇಗೌಡ ಇತರರು ಇದ್ದರು.ಫೆ.16ರಂದು ಬೋಧನಾ ಕಾರ್ಯಾಗಾರ

ಮೈಸೂರು: ನಗರದ ಮಹಾಜನ ಕಾಲೇಜು ಇಂಗ್ಲಿಷ್ ವಿಭಾಗದ ವತಿಯಂದ ಫೆ.16 ರಂದು ಇಂಗ್ಲಿಷ್ ವ್ಯಾಕರಣ ಬೋಧನಾ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕ ಎನ್.ಕೃಷ್ಣಸ್ವಾಮಿ ಭಾಗವಹಿಸುವರು. ಆಸಕ್ತರು ಮಾಹಿತಿಗೆ 98454 80459,  99456 53221 ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry