63ನೇ ವರ್ಷಕ್ಕೆ ಕಾಲಿರಿಸಿದ ರಜನಿಕಾಂತ್

7

63ನೇ ವರ್ಷಕ್ಕೆ ಕಾಲಿರಿಸಿದ ರಜನಿಕಾಂತ್

Published:
Updated:

ಚೆನ್ನೈ (ಪಿಟಿಐ): ಸೂಪರ್‌ಸ್ಟಾರ್ ರಜನಿಕಾಂತ್ ಅವರು ಈ ಶತಮಾನದ ವಿಶೇಷ ದಿನವಾದ (12.12.12) ಬುಧವಾರ 63ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ರಜನಿಕಾಂತ್ ಅವರ ಈ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.ನಟ- ನಿರ್ದೇಶಕ ರಾಘವೇಂದ್ರ ಲಾರೆನ್ಸ್ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರು, ರಜನಿ ಕುರಿತ ವಿಶೇಷ ಸಂಗೀತ- ದೃಶ್ಯ ಮಾಲಿಕೆಯನ್ನು ಹೊರತಂದಿದ್ದಾರೆ. ಟಿವಿ ವಾಹಿನಿಗಳು ರಜನಿ ಅವರ ಬಗ್ಗೆ ಕಾರ್ಯಕ್ರಮ ಸರಣಿಯನ್ನು ಮತ್ತು ಅವರ ನಟಿಸಿರುವ ಯಶಸ್ವಿ ಸಿನಿಮಾಗಳನ್ನು ಪ್ರಸಾರ ಮಾಡುತ್ತಿವೆ.`ಎಫ್‌ಎಂ' ರೇಡಿಯೊಗಳು ಕೂಡ ರಜನಿ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.

ಬೆಂಗಳೂರಿನ `ಬಿಟಿಎಸ್'ನಲ್ಲಿ ನಿರ್ವಾಹಕರಾಗಿದ್ದ ಶಿವಾಜಿ ರಾವ್ ಗಾಯಕವಾಡ್, ತಮ್ಮ ಅಭಿನಯ ಸಾಮರ್ಥ್ಯದಿಂದ `ರಜನಿಕಾಂತ್' ಆಗಿ ಪರಿವರ್ತನೆಯಾದ ಪರಿ ಅನನ್ಯವಾದುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry