ಶನಿವಾರ, ಸೆಪ್ಟೆಂಬರ್ 21, 2019
24 °C

65 ಆರೋಪಿಗಳ ಬಿಡುಗಡೆ

Published:
Updated:

ಚಿಂತಾಮಣಿ: ತಾಲ್ಲೂಕಿನ ಯರ‌್ರಕೋಟೆ ಮತ್ತು ಬಾರ‌್ಲಹಳ್ಳಿಯಲ್ಲಿ ಆಗಸ್ಟ್ 2ರಂದು ನಡೆದ 10 ಮಂದಿ ಕಳ್ಳರ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ 72 ಮಂದಿ ಆರೋಪಿಗಳ ಪೈಕಿ 65 ಮಂದಿಯನ್ನು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.ಜಿಲ್ಲಾ ತ್ವರಿತ ನ್ಯಾಯಾಲಯದಲ್ಲಿ ಕಳೆದ ವಾರ ಜಾಮೀನು ಸಿಕ್ಕಿದ್ದರೂ ಕಾನೂನು ವಿಧಿವಿಧಾನಗಳನ್ನು ಪೂರೈಸುವುದು ತಡವಾಗಿದ್ದರಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಉಳಿದ 7 ಮಂದಿ ದಾಖಲೆ ಒದಗಿಸುವುದು ತಡವಾಗಿದ್ದರಿಂದ ಬಿಡುಗಡೆ ಸಾಧ್ಯವಾಗಲಿಲ್ಲ.ಆರೋಪಿಗಳಿಗೆ ತಲಾ ರೂ. 25 ಸಾವಿರ ನಗದು ಮತ್ತು ರೂ. 50 ಸಾವಿರ ಮೌಲ್ಯದ ಬಾಂಡ್ ನೀಡುವ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ. ಆರೋಪಿಗಳ ಪರವಾಗಿ ಶ್ರಿನಾಥ್, ಪಾಪಿರೆಡ್ಡಿ ಇನ್ನಿತರ ವಕೀಲರು ವಕಾಲತ್ತು ವಹಿಸಿದ್ದಾರೆ.ಯರ‌್ರಕೋಟೆ ಬಳಿ 6 ಜನರನ್ನು ಹಾಗೂ ಬಾರ‌್ಲಹಳ್ಳಿ ಸಮೀಪದಲ್ಲಿ 4 ಜನರನ್ನು ಸಾರ್ವಜನಿಕರು ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು.ನಂತರ ಅದೇ ದಿನ ರಾತ್ರಿ ಪೊಲೀಸರು ಸುತ್ತಮುತ್ತಲ ಗ್ರಾಮಗಳ ಮನೆ ಮನೆಗೂ ನುಗ್ಗಿ 72 ಜನರನ್ನು ಬಂಧಿಸಿದ್ದರು.

Post Comments (+)