66ರ ಹರೆಯದಲ್ಲಿ ಕಾನೂನು ಪದವಿ!

7

66ರ ಹರೆಯದಲ್ಲಿ ಕಾನೂನು ಪದವಿ!

Published:
Updated:

ಧಾರವಾಡ: ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧೀನ ಅಧಿಕಾರಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಎಸ್‌.ಜಿ.ಬಿರಾದಾರ ತಮ್ಮ 66ನೇ ವಯಸ್ಸಿನಲ್ಲಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ನಿಂದ ಕಾನೂನು ಪದವಿ ಪಡೆದಿದ್ದಾರೆ.ಎರಡು ವರ್ಷಗಳ ಅವಧಿಯ 'ಮಾಸ್ಟರ್‌ ಆಫ್‌ ಬಿಸಿನೆಸ್ ಲಾ’ ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿದ ಬಿರಾದಾರ, ’ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಬಳಿಕ ವಕೀಲಿ ವೃತ್ತಿ ಆರಂಭಿಸಿದೆ.ಆದರೆ ಕಾನೂನಿನ ಬಗ್ಗೆ ತಿಳಿವಳಿಕೆ ಸಾಲದು ಎನಿಸಿ ಸ್ನಾತಕೋತ್ತರ ಪದವಿ ಪಡೆಯಲು ತೀರ್ಮಾನಿಸಿದೆ. ಇದೀಗ ಪದವಿ ಪಡೆದಿದ್ದು, ಈ ಭಾಗದ ಜನರ ಅಗತ್ಯವಾಗಿರುವ ವಾಣಿಜ್ಯ ಕಾನೂನಿನ ಬಗ್ಗೆ ಮಾಹಿತಿ ನೀಡುತ್ತೇನೆ. ಕಾನೂನು ಸಾಹಿತ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ. ಜೊತೆಗೆ ಅಸಂಘಟಿತ ವಲಯದಲ್ಲಿನ ಜನರಿಗೆ ನನ್ನ ಅನುಭವ ಮತ್ತು ಜ್ಞಾನದ ಮೂಲಕ ಸೇವೆ ಸಲ್ಲಿಸುತ್ತೇನೆ’ ಎಂದರು.ಉದ್ಯಮಿ ಸಿ.ಬಿ.ಯಲಿಗಾರ ‘ಸದಾ ಚಟುವಟಿಕೆಯ ವ್ಯಕ್ತಿತ್ವ ಮೈಗೂಡಿಸಿಕೊಂಡಿರುವ ಬಿರಾದಾರ ಅವರು ಇದೀಗ ವಾಣಿಜ್ಯ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಸಂತಸದ ಸಂಗತಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry