ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

66 ಮತ್ತು 223ಬಿ ಸಂಖ್ಯೆ ಬಸ್ ಬೇಕು

ಅಕ್ಷರ ಗಾತ್ರ

ಶಿವಾಜಿನಗರದಿಂದ ಬಸವೇಶ್ವರ ವೃತ್ತ, ಶಿವಾನಂದ ವೃತ್ತ, ಸೆಂಟ್ರಲ್, ಓಕಳಿಪುರ, ಮಾಗಡಿ ರಸ್ತೆ ಮಾರ್ಗವಾಗಿ ನಿತ್ಯ ನೂರಾರು ಉದ್ಯೋಗಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಾರ್ಗ ಸಂಖ್ಯೆ 66 ಮತ್ತು 223ಬಿ ಬಸ್‌ಗಳು ಪ್ರತಿ ಟ್ರಿಪ್‌ನಲ್ಲಿ ಭರ್ತಿಯಾಗಿರುತ್ತಿದ್ದವು. ಆದರೆ ಇತ್ತೀಚೆಗೆ ಮಾರ್ಗ ಸಂಖ್ಯೆ 66 ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಇರುವ ಒಂದು ಬಸ್ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ.

ಕಚೇರಿ, ಅಂಗಡಿ ಮುಂಗಟ್ಟು, ಕಾಲೇಜು ಮುಗಿಸಿಕೊಂಡು ಬರುವ ಮಕ್ಕಳು, ಮಹಿಳೆಯರು, ಇತರೆ ಪ್ರಯಾಣಿಕರು ಶಿವಾಜಿನಗರದಿಂದ ಮಾಗಡಿ ರಸ್ತೆಗೆ ತಲುಪಬೇಕಾದರೆ ಪರದಾಡಬೇಕಾಗಿದೆ. ಪ್ರತಿದಿನ ರಾತ್ರಿ 9.15ಕ್ಕೆ ಶಿವಾಜಿನಗರದಿಂದ ಜ್ಞಾನಭಾರತಿ ವಸತಿಗೃಹ, ನಾಗರಭಾವಿವರೆಗೆ ಮಾಗಡಿ ರಸ್ತೆ ಮೂಲಕ ಸಂಚರಿಸುತ್ತಿದ್ದ `223 ಬಿ' ಬಸ್ ಎಲ್ಲರಿಗೂ ಅನುಕೂಲವಾಗಿತ್ತು. ಈಗ ಸಂಸ್ಥೆಯವರು ಪ್ರಯಾಣಿಕರ ಹಿತ ಬಲಿಕೊಟ್ಟು ಯಾವುದೊ ಕಂಪೆನಿಯ ಕಾರ್ಮಿಕರ ಹಿತಕ್ಕಾಗಿ, ಹಣಗಳಿಕೆ ಆಸೆಗಾಗಿ ಈ ಬಸ್ಸನ್ನು ಕಂಪೆನಿ ಸೇವೆಗೆ ಬಿಟ್ಟಿದ್ದಾರೆ. ಇದರಿಂದ ಮಾಗಡಿ ರಸ್ತೆ ಮಾರ್ಗದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಬಿ.ಎಂ.ಟಿ.ಸಿ.  ಪ್ರಯಾಣಿಕರ ಹಿತಕ್ಕೆ ಗಮನಕೊಟ್ಟು ಮಾರ್ಗದ ಸಂಖ್ಯೆ 66ರ ಬಸ್‌ಗಳನ್ನು ಹೆಚ್ಚಿಸಬೇಕಾಗಿ ಹಾಗೂ ಶಿವಾಜಿನಗರದಿಂದ ರಾತ್ರಿ 9.15ಕ್ಕೆ ಹೊರಡುತ್ತಿದ್ದ 223ಬಿ ಮಾರ್ಗದ ಬಸ್ ಅನ್ನು ತಪ್ಪದೆ ಓಡಿಸಬೇಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT