ಸೋಮವಾರ, ಮೇ 25, 2020
27 °C

6615 ಆಸರೆ ಮನೆಗಳು ಸಿದ್ಧ: ಗೋಯಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 2009ರ ಸೆಪ್ಟೆಂಬರ್ ತಿಂಗಳಲ್ಲಿ ಉಂಟಾದ ನೆರೆಹಾವಳಿಯ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ಗುಲ್ಬರ್ಗ ವಿಭಾಗದಲ್ಲಿ ಈ ತನಕ 6,615 ಆಸರೆ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ ಎಂದು ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್ ಹೇಳಿದ್ದಾರೆ.ಇನ್ನೂ 12,284 ಮನೆಗಳು ನಿರ್ಮಾಣ ಹಂತದಲ್ಲಿವೆ. 2689 ಮನೆಗಳ ಮೇಲ್ಛಾವಣಿ, 2833 ಮನೆಗಳ ಆಧಾರಸ್ತಂಭಗಳು ಮತ್ತು 6762 ಮನೆಗಳ ತಳಪಾಯ ನಿರ್ಮಾಣ ಹಂತದವರೆಗೆ ತಲುಪಿವೆ ಎಂದಿದ್ದಾರೆ.  67 ಗ್ರಾಮ ಪೂರ್ಣ ಮತ್ತು 70 ಗ್ರಾಮ ಭಾಗಶ: ಸ್ಥಳಾಂತರ ಸೇರಿದಂತೆ 137 ಗ್ರಾಮ ಸ್ಥಳಾಂ ತರಿಸಿ 26510 ಮನೆ ಗಳನ್ನು ನಿರ್ಮಿ ಸುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳಲಾಗಿತ್ತು.ನೆರೆಪೀಡಿತ 129 ಗ್ರಾಮಗಳಲ್ಲಿ ವಿದ್ಯುತ್, 135 ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ, 63 ಗ್ರಾಮಗಳಲ್ಲಿ ಇತರ ಮೂಲಸೌಕರ್ಯ ಹಾಗೂ 57 ಗ್ರಾಮಗಳಲ್ಲಿ ಸಂಪೂರ್ಣ ಮೂಲ ಸೌಕರ್ಯ ಕಲ್ಪಿಸಲಾಗಿದೆ. 26409 ಮನೆಗಳ ನಿರ್ಮಾಣ ಕಾರ್ಯಕ್ಕಾಗಿ 40 ದಾನಿಗಳು ಮುಂದೆ ಬಂದಿದ್ದು, ಇತರರು ಉಳಿದ 101 ಮನೆಗಳನ್ನು ನಿರ್ಮಿಸಲಿದ್ದಾರೆ ಎಂದು ಹೇಳಿದ್ದಾರೆ.ಪುನರ್ವಸತಿ ಯೋಜನೆಗಾಗಿ ಸ್ಥಳಾಂತರಿಸಲು ಸರ್ಕಾರ ಉದ್ದೆಸಿದ್ದ ಗ್ರಾಮಗಳ ವಿವರ ಹೀಗಿದೆ. ಗುಲ್ಬರ್ಗ-41( 5 ಪೂರ್ಣ ಮತ್ತು 36 ಭಾಗಶ:), ಯಾದಗಿರಿ-6 (4 ಪೂರ್ಣ ಮತ್ತು 2 ಭಾಗಶ:), ರಾಯಚೂರು- 52 (36 ಪೂರ್ಣ ಮತ್ತು 16 ಭಾಗಶ:) ಬೀದರ-3 (3ಭಾಗಶ:), ಬಳ್ಳಾರಿ- 18 (13 ಪೂರ್ಣ, 5 ಭಾಗಶಃ) ಮತ್ತು ಕೊಪ್ಪಳ- 17 (9ಪೂರ್ಣ, 8ಭಾಗಶಃ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.