7ಟನ್ ರಕ್ತಚಂದನ ವಶ

ಭಾನುವಾರ, ಜೂಲೈ 21, 2019
26 °C

7ಟನ್ ರಕ್ತಚಂದನ ವಶ

Published:
Updated:

ತುಮಕೂರು: ತಾಲ್ಲೂಕಿನ ಸೋರೆಕುಂಟೆ ಕ್ರಾಸ್ ಬೊಮ್ಮೇಗೌಡನಪಾಳ್ಯ ಗ್ರಾಮದ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ರೂ. 2.5 ಕೋಟಿ ಮೌಲ್ಯದ ರಕ್ತಚಂದನವನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.ಸುರೇಶ್ ಎಂಬುವವರಿಗೆ ಸೇರಿದೆ ತೋಟದ ಮನೆಯಿಂದ ಸುಮಾರು ಏಳು ಟನ್ ರಕ್ತಚಂದನ ವಶಪಡಿಸಿಕೊಳ್ಳಲಾಗಿದೆ.ಸುರೇಶ್ ಪರಾರಿಯಾಗಿದ್ದು, ಆತನಿಗೆ ಸೇರಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತನಿಖಾ ದಳ ರಚಿಸಲಾಗಿದೆ.ರಕ್ತಚಂದನವನ್ನು ಆಂಧ್ರಪ್ರದೇಶದಿಂದ ತಂದಿರಬಹುದು. ಇದಕ್ಕೆ ಹೊರದೇಶಗಳಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಕಳ್ಳಸಾಗಣೆ ಮಾಡಲು ತಂದಿರಬಹುದು ಎಂದು ಪೊಲೀಸರ ಶಂಕಿಸಿದ್ದಾರೆ.ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ ಸುಮಾರು ಮೂರು ಕೋಟಿ ಬೆಲೆಯ ರಕ್ತಚಂದನ  ವಶಪಡಿಸಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry