ಭಾನುವಾರ, ಏಪ್ರಿಲ್ 11, 2021
32 °C

7ನೇ ಮಹಡಿಯಿಂದ ಬಿದ್ದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂರು ವರ್ಷದ ಗಂಡು ಮಗುವೊಂದು ಅಪಾರ್ಟ್‌ಮೆಂಟ್ ಕಟ್ಟಡದ ಏಳನೇ ಅಂತಸ್ತಿನ ಫ್ಲಾಟ್‌ನ ಕಿಟಕಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ಹರಳೂರು ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.ಹರಳೂರು ಮುಖ್ಯರಸ್ತೆಯ ಎಸ್‌ಜೆಆರ್ ಪಾರ್ಕ್ ವಿಸ್ತಾ ಅಪಾರ್ಟ್‌ಮೆಂಟ್‌ನ ಏಳನೇ ಅಂತಸ್ತಿನಲ್ಲಿ ವಾಸವಿರುವ ನಿತಿನ್ ಎಂಬುವರ ಮಗು ನೋಡಲ್ ಮೃತಪಟ್ಟಿದ್ದು, ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೇರಳ ಮೂಲದ ನಿತಿನ್, ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಅವರು ರಾತ್ರಿ 9.30ರ ಸುಮಾರಿಗೆ ಪತ್ನಿಯೊಂದಿಗೆ ಫ್ಲಾಟ್‌ನ ನಡುಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದರು. ಈ ವೇಳೆ ಮಲಗುವ ಕೋಣೆಯಲ್ಲಿನ ಮಂಚದ ಮೇಲೆ ಆಟವಾಡುತ್ತಿದ್ದ ಮಗು ನೋಡಲ್, ಪಕ್ಕದಲ್ಲೇ ಇದ್ದ ಕಿಟಕಿಯಿಂದ ನುಸುಳಿ ಕೆಳಗೆ ಬಿದ್ದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಸ್ವಲ್ಪ ಸಮಯದಲ್ಲೇ ಮೃತಪಟ್ಟಿತು ಎಂದು ಪೊಲೀಸರು ಹೇಳಿದ್ದಾರೆ.ನಿತಿನ್ ಅವರ ಫ್ಲಾಟ್‌ನ ಕಿಟಕಿಗೆ ಸರಳುಗಳನ್ನು ಅಳವಡಿಸಿರಲಿಲ್ಲ. ಅಲ್ಲದೇ, ಘಟನೆ ನಡೆದ ಸಂದರ್ಭದಲ್ಲಿ ಕಿಟಕಿಯ ಗಾಜು ಸಹ ತೆರೆದಿತ್ತು. ಇದರಿಂದಾಗಿ ಮಗು ಕಿಟಕಿಯಿಂದ ನುಸುಳಿ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.