ಶುಕ್ರವಾರ, ಅಕ್ಟೋಬರ್ 18, 2019
27 °C

7 ತಿಮಿಂಗಿಲ ಸಾವು

Published:
Updated:

ವೆಲ್ಲಿಂಗ್ಟನ್(ಎಪಿ): ಆಳವಿಲ್ಲದ ಸಮುದ್ರ ತೀರದೆಡೆಗೆ ಸಾಮೂಹಿಕವಾಗಿ  ಧಾವಿಸಿದ ನಂತರ ಮರಳಿನಲ್ಲಿ ಸಿಲುಕಿ ಏಳು ತಿಮಿಂಗಿಲಗಳು ಸಾವಿಗೀಡಾಗಿರುವ ಘಟನೆ ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದೆ. ಸೌಥ್ ಐಲ್ಯಾಂಡ್‌ನ ವಾಯವ್ಯಕ್ಕಿರುವ ಫೇರ್‌ವೆಲ್ ಟಿಫ್ ಎಂಬಲ್ಲಿ ಈ ಘಟನೆ ನಡೆದಿದೆ.ತಿಮಿಂಗಿಲಗಳಿಗೆ ಅಪಾಯಕಾರಿಯಾದ ಈ ಪ್ರದೇಶದಲ್ಲಿ ಒಟ್ಟು 25 ತಿಮಿಂಗಿಲಗಳು ಸಿಲುಕಿದ್ದವು. ಆ ಪೈಕಿ ಉಳಿದ 18  ತಿಮಿಂಗಿಲಗಳನ್ನು ಪುನಃ ಆಳ ಸಮುದ್ರದೆಡೆಗೆ ಈಜುವಂತೆ ಮಾಡಲಾಗಿದ್ದು,ಅವೆಲ್ಲವೂ ಅಪಾಯದಿಂದ ಪಾರಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

Post Comments (+)