ಸೋಮವಾರ, ಮೇ 10, 2021
25 °C
ಪುತ್ತೂರು ತಾಲ್ಲೂಕಿನಲ್ಲಿ ಶಂಕಿತ 50 ಡೆಂಗೆ ಪ್ರಕರಣ

7 ಪ್ರಕರಣ ದೃಢ-ಎಲ್ಲರೂ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ತಾಲ್ಲೂಕಿನಲ್ಲಿ ಜನವರಿಯಿಂದ ಈ ತನಕ ಒಟ್ಟು 50 ಶಂಕಿತ ಡೆಂಗೆ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರದಿಯಾದ 7 ಪ್ರಕರಣಗಳು ದೃಢಪಟ್ಟಿವೆ. ಡೆಂಗೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದ್ದಾರೆ. ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಲೋಕೇಶ್, ದಾಮೋದರ್, ದೇವಣ್ಣ ಗೌಡ, ರಾಮಚಂದ್ರ ಮತ್ತು ಶರತ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವೆಂಕಟೇಶ್ ಹಾಗೂ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಮ್ಮಣ್ಣಿ ಎಂಬವರಿಗೆ ಡೆಂಗೆ ಬಾಧಿಸಿರುವುದು ಪರೀಕ್ಷೆಯಿಂದ ದೃಡಪಟ್ಟಿದೆ. ಅವರೆಲ್ಲರೂ ಗುಣಮುಖರಾಗಿರುವುದಾಗಿ ಆರೋಗ್ಯ ಇಲಾಖೆಯ ದಾಖಲೆಗಳಿಂದ ತಿಳಿದು ಬಂದಿದೆ.ಖಾಸಗಿ ಆಸ್ಪತ್ರೆಗೆಗಳಲ್ಲಿ 43 ಮಂದಿ ಶಂಕಿತ ಡೆಂಗೆ ಪೀಡಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಾಲ್ಲೂಕಿನ 19 ಮಂದಿ, ಸುಳ್ಯ ತಾಲ್ಲೂಕಿನ 13, ಬೆಳ್ತಂಗಡಿಯ 4, ಬಂಟ್ವಾಳದ 3, ಮಡಿಕೇರಿ ಮತ್ತು ಕೇರಳದ ತಲಾ ಇಬ್ಬರು ಶಂಕಿತ ಡೆಂಗೆ ರೋಗಿಗಳು ಪುತ್ತೂರಿನ  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.ಒಂದೇ ದಿನದಲ್ಲಿ ವರದಿ:  ಡೆಂಗೆ ಪ್ರಕರಣಗಳಿಗೆ ಸಂಬಂಧಿಸಿದ ಎಲೈಜಾ ತಪಾಸಣಾ ವರದಿ ಮಂಗಳೂರಿನ ಜಿಲ್ಲಾ ಪ್ರಯೋಗಾಲಯ, ಕೆಎಂಸಿ ಆಸ್ಪತ್ರೆ ಮತ್ತು ಫಾಧರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಲಭಿಸುತ್ತದೆ. ಒಂದೇ ದಿನದಲ್ಲಿ ಶಂಕಿತ ಡೆಂಗೆ ರೋಗಿಗಳ ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿ ವರದಿ ಪಡೆಯಲು ಅವಕಾಶವಿದೆ ಎಂದು ತಾಲ್ಲೂಕು ಆರೋಗ್ಯ ಇಲಾಖೆ ತಿಳಿಸಿದೆ.ಶಂಕಿತ ಡೆಂಗೆ ಜ್ವರ ಇರುವ ರೋಗಿಗಳ ಮನೆಯ ಸುತ್ತಮುತ್ತ ಸೊಳ್ಳೆಗಳ ಲಾರ್ವ ನಾಶಗೊಳಿಸುವ ಮೂಲಕ ಡೆಂಗೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಮತ್ತು ಪ್ರಕರಣಗಳು ಹಬ್ಬುವ ಕಡೆಗಳಲ್ಲಿ  ಫಾಗಿಂಗ್ ನಡೆಸುವಂತೆ ಸೂಚಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.