ಬುಧವಾರ, ನವೆಂಬರ್ 20, 2019
25 °C

7 ಮಂದಿ ಎ.ಡಿ.ಸಿ ಗಳ ವರ್ಗಾವಣೆ

Published:
Updated:

ಬೆಂಗಳೂರು: ಚುನಾವಣಾ ಆಯೋಗದ ಸೂಚನೆಯಂತೆ ಏಳು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಸಂಗಪ್ಪ (ಕೋಲಾರ), ಪೆದ್ದಪ್ಪಯ್ಯ (ತುಮಕೂರು), ಪಿ.ವೆಂಕಟೇಶ (ಬಳ್ಳಾರಿ), ನಾಗೇಂದ್ರ ಪ್ರಸಾದ್ (ಗುಲ್ಬರ್ಗ), ಲತಾಕುಮಾರಿ (ಬೀದರ್), ನಾಗರಾಜು (ಗದಗ) ಮತ್ತು ದೊಡ್ಡಪ್ಪ (ದಾವಣಗೆರೆ).ಒಂದೇ ಜಾಗದಲ್ಲಿ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು ಎಂಬ ಕಾರಣಕ್ಕೆ ಆಯೋಗದ ಸೂಚನೆಯಂತೆ ಈ ವರ್ಗಾವಣೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)