ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಕೆ.ಜಿ ಗಾತ್ರದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಿವಾಸಿ ತಾರಾ ರಾಜ್‌ಕುಮಾರ್ (61) ಅವರ ಉದರದಲ್ಲಿ ಕಾಣಿಸಿಕೊಂಡಿದ್ದ 7 ಕೆ.ಜಿ.ಗಾತ್ರದ ಗಡ್ಡೆಯನ್ನು ಸೌತ್ ಸಿಟಿ ಆಸ್ಪತ್ರೆಯು ವೈದ್ಯರು ಈಚೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದಿದ್ದಾರೆ.

ಸ್ತ್ರೀರೋಗ ತಜ್ಞರಾದ ಡಾ. ಶಾಲಿನಿ ದತ್ತ ಮತ್ತು ಡಾ.ಧನಂಜಯ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. `ಸಾಮಾನ್ಯವಾಗಿ 10 ಕೆ.ಜಿ. ಗಾತ್ರದ ಗಡ್ಡೆಗಳು ದೇಹದಿಂದ ತೆಗೆದ ಉದಾಹರಣೆಯಿದೆ.

ಅದನ್ನು ತೆಗೆಯುವಾಗ ರಕ್ತಸ್ರಾವ ಅಧಿಕವಾಗಿರುತ್ತದೆ. ಈ ಪ್ರಕರಣದಲ್ಲಿ ರೋಗಿಗೆ ಕಡಿಮೆ ರಕ್ತಸ್ರಾವವಾಗಿದ್ದು, ಯಾವುದೇ ತೊಂದರೆಯಿಲ್ಲದೇ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ~ ಎಂದು ಡಾ.ಶಾಲಿನಿ ದತ್ತ `ಪ್ರಜಾವಾಣಿ~ಗೆ ಹೇಳಿದರು.

`ಉದರದಲ್ಲಿ ಗಡ್ಡೆಯು ಬೆಳೆಯಲು ಆರಂಭವಾಗಿದ್ದರಿಂದ ಹೊಟ್ಟೆಯು ದೊಡ್ಡದಾಯಿತು. ಇದನ್ನು ಮೊದಲ ತಪಾಸಣೆಯಲ್ಲಿಯೇ ಕಂಡುಕೊಂಡು ರೋಗಿಯ ಗಮನಕ್ಕೆ ತಂದು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

ನೋವು ರಹಿತ ಗಡ್ಡೆಯಾಗಿದ್ದರಿಂದ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಈಗ ರೋಗಿಯು ಆರೋಗ್ಯವಾಗಿದ್ದಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT