ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ಹಳ್ಳಿಗಳಿಗೆ ಯಗಚಿ ನೀರು

Last Updated 27 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಅರಸೀಕೆರೆ: ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದಿಂದ ಫ್ಲೊರೈಡ್ ಪೀಡಿತ ಅರಸೀಕೆರೆ ತಾಲ್ಲೂಕಿನ 58 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ 18.33 ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತದ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಎರಡು ತಿಂಗಳಲ್ಲಿ 70 ಹಳ್ಳಿಗಳ ಜನರಿಗೆ ಕುಡಿಯಲು ಯಗಚಿ ನೀರು ದೊರೆಯಲಿದೆ.

ಯಗಚಿ ಜಲಾಶಯದಿಂದ ಸುಮಾರು ಮೂರು ಕಿ.ಮೀ ದೂರ ವಿರುವ ಬಂಟೇನಹಳ್ಳಿ ಸಮೀಪದ ಸೋಮನಪುರದ ಬಳಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಈ ಘಟಕಕ್ಕೆ ಯಗಚಿ ಜಲಾಶಯದ ಬಳಿಯಲ್ಲಿ ಸ್ಥಾಪಿಸಿರುವ ಜಾಕ್‌ವೆಲ್ ನಿಂದ 100 ಅಶ್ವಶಕ್ತಿಯ ಎರಡು ಮೋಟಾರ್‌ಗಳ ಮೂಲಕ ನೀರನ್ನು ಪಂಪ್ ಮಾಡುವ ಯೋಜನೆ ರೂಪಿಸಲಾಗಿದೆ.

ಜಲಾಶಯದಲ್ಲಿ ನೀರಿನಮಟ್ಟ ಕೆಳಗಿಳಿದಾಗಲೂ ಕುಡಿಯುವ ನೀರು ಸರಬರಾಜಿಗೆ ತೊಂದರೆ ಆಗದಂತೆ ಜಲಾಶಯದ ಮಧ್ಯದಿಂದ ನೀರೆತ್ತಲು ಪೈಪ್ ಅಳವಡಿ ಸಲಾಗಿದೆ.ನೀರು ಶುದ್ಧಿಕರಣ ಘಟಕವು ದಿನಕ್ಕೆ ಐದು ಮಿಲಿಯನ್ ಲೀಟರ್ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಫ್ಲೊರೈಡ್‌ಪೀಡಿತ ಹಳ್ಳಿ ಗಳಿಗೆ ನೀರು ಸರಬರಾಜು ಮಾಡಲು ಗುಡ್ಡದ ಕೆಂಗೇನಹಳ್ಳಿ, ಕಣಿವೆ ರಾಮೇಶ್ವರ, ಸಂಕೊಂಡನಹಳ್ಳಿ ಗುಡ್ಡ ಮತ್ತು ಗೇರು ಮರದ ಬಳಿ ಓವರ್ ಹೆಡ್ ಟ್ಯಾಂಕ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದೆ.

ಈ ಟ್ಯಾಂಕ್‌ಗಳಿಗೆ ಸೋಮನಪುರ ನೀರು ಶುದ್ಧಿಕರಣ ಘಟಕದಿಂದ ಗುರುತ್ವಾಕರ್ಷಣಾ ಬಲದಿಂದಲೇ ನೀರು ಶೇಖರಣೆ ಆಗಲಿದೆ. ನಂತರ ಟ್ಯಾಂಕ್‌ಗಳಿಂದ ಅರಸೀಕೆರೆ ತಾಲ್ಲೂಕಿನ ಬರದ ಛಾಯೆಗೆ ಸಿಲುಕುವ 58 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಿಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣ ಗೊಳ್ಳುವ ಹಂತದಲ್ಲಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ಅಡಿಯಲ್ಲಿ ಎನ್.ಆರ್.ಡಬ್ಲ್ಯೂಪಿ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದಿಸೆಯಲ್ಲಿ ತಾಲ್ಲೂಕಿನ ಗಂಡಸಿ ಹೋಬಳಿಯ 127 ಹಳ್ಳಿಗಳಿಗೆ ಹೇಮಾವತಿ ನದಿ ಮೂಲದಿಂದ 26.40 ಕೋಟಿ ಮಂಜೂರಾತಿ ದೊರೆತಿದೆ.  

2ನೇ ಹಂತದ ಕಾಮಗಾರಿಗೆ ರೂ. 86.85 ಕೋಟಿ ಮಂಜೂರು:  ತಾಲ್ಲೂಕಿನ ಬಾಣಾವರ ಹಾಗೂ ಕಣಕಟ್ಟೆ ಹೋಬಳಿ ಕೆಲ ಗ್ರಾಮಗಳು ಸೇರಿದಂತೆ 348 ಹಳ್ಳಿಗಳಿಗೆ ಯಗಚಿ ಜಲಾಶಯದಿಂದ 60.45ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಅನು ಮೋದನೆ ದೊರೆತಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT