71 ಹೆಲಿಕಾಪ್ಟರ್ ಖರೀದಿ

7

71 ಹೆಲಿಕಾಪ್ಟರ್ ಖರೀದಿ

Published:
Updated:

ನವದೆಹಲಿ (ಪಿಟಿಐ): ವಾಯು ಪಡೆ  ಹೆಚ್ಚುವರಿಯಾಗಿ ಅತ್ಯಾಧುನಿಕವಾದ 71 ಸಶಸ್ತ್ರ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಆಲೋಚಿಸಿದೆ.

ಹೆಚ್ಚಿನ ಕಾರ್ಯಕ್ಷಮತೆ ಎಂಜಿನ್,  ಅಧಿಕ ಸಂಖ್ಯೆಯಲ್ಲಿ ಸಶಸ್ತ್ರ ಮತ್ತು ಉಪಕರಣಗಳನ್ನು ಕೊಂಡೊಯ್ಯುವ ಅನುಕೂಲ ಹಾಗೂ ಹೆಚ್ಚಿನ ಎತ್ತರದಲ್ಲೂ ಹಾರಾಟ ನಡೆಸುವ ಸಾಮರ್ಥ್ಯವು ಈಗ ಖರೀದಿಸಲು ಉದ್ದೇಶಿಸಿರುವ `ಎಂಐ-71 ವಿ5~ ಹೆಲಿಕಾಪ್ಟರ್‌ನಲ್ಲಿ ಇದೆ.

71 ಹೆಲಿಕಾಪ್ಟರ್‌ಗಳಲ್ಲಿ 59 ಅನ್ನು ವಾಯು ಪಡೆಯೇ ಇರಿಸಿಕೊಳ್ಳಲಿದೆ. ಉಳಿದ 12 ಹೆಲಿಕಾಪ್ಟರ್‌ಗಳನ್ನು ಗೃಹ ಇಲಾಖೆಗೆ ನೀಡಲಿದೆ.

 ಇದರಲ್ಲಿ ಆರು ಗಡಿ ಭದ್ರತಾ ಪಡೆಗೆ, ಉಳಿದವನ್ನು ಕೇಂದ್ರದ ವಿವಿಧ ಸಶಸ್ತ್ರ ಪೊಲೀಸ್ ಪಡೆಗಳಿಗೆ ಹಂಚಲಾಗುತ್ತದೆ ಎಂದು ವಾಯು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ 80 ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಪೂರೈಸುವಂತೆ ವಾಯು ಪಡೆ ರಷ್ಯಾಕ್ಕೆ ಕೋರಿಕೆ ಸಲ್ಲಿಸಿದ್ದು, ಇದನ್ನು ಹೊರತು ಪಡಿಸಿ ಮತ್ತೆ 71 ಹೆಲಿಕಾಪ್ಟರ್‌ಗಳನ್ನು ಖರೀದಿಸಲಿದೆ.

ರಷ್ಯಾ ಪೂರೈಕೆ ಮಾಡುವ 80 ಹೆಲಿಕಾಪ್ಟರ್‌ಗಳಲ್ಲಿ ಮೊದಲ ಕಂತಿನಲ್ಲಿ ಆಗಮಿಸಿದ ಕೆಲವು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಸಚಿವ ಎ.ಕೆ. ಆಂಟನಿ ಶುಕ್ರವಾರವಷ್ಟೇ ವಾಯು ಪಡೆಗೆ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry