72ಸಾವಿರ ಗ್ರಾಮಗಳಿಗೆ ಬ್ಯಾಂಕ್ ಶಾಖೆ

7

72ಸಾವಿರ ಗ್ರಾಮಗಳಿಗೆ ಬ್ಯಾಂಕ್ ಶಾಖೆ

Published:
Updated:

ಅಗರ್ತಲ (ಐಎಎನ್‌ಎಸ್):  ಬ್ಯಾಂಕಿಂಗ್ ಸೌಲಭ್ಯಗಳು  ಲಭಿಸದ 72 ಸಾವಿರಕ್ಕೂ ಹೆಚ್ಚು ಗ್ರಾಮಗಳನ್ನು 2012ರ ಒಳಗಾಗಿ ಬ್ಯಾಂಕಿಂಗ್ ಸೇವೆಯಡಿ ತರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ‘ಆರ್‌ಬಿಐ’ ನಿರ್ದೇಶನ ಅನುಸಾರ ಬ್ಯಾಂಕಿಂಗ್ ಸೌಲಭ್ಯ ಇಲ್ಲದ, ಸುಮಾರು 2 ಸಾವಿರ ಜನಸಂಖ್ಯೆ ಇರುವ ಗ್ರಾಮ ಹಾಗೂ ಕುಗ್ರಾಮಗಳನ್ನು ಗುರುತಿ  ಹೊಸ ಶಾಖೆಗಳನ್ನು ತೆರೆಯಲು ವಾಣಿಜ್ಯ ಬ್ಯಾಂಕುಗಳು ಪ್ರಯತ್ನ ಮುಂದುವರೆಸಿವೆ ಎಂದು ಯುನೈಟೆಡ್ ಬ್ಯಾಂಕ್ ಆಫ್ಇಂಡಿಯಾ (ಯುಬಿಐ) ಅಧ್ಯಕ್ಷ ಭಾಸ್ಕರ್ ಸೇನ್ ತಿಳಿಸಿದ್ದಾರೆ.ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಸ್ಥಳೀಯರು, ಸಂಘ ಸಂಸ್ಥೆಗಳು, ಉದ್ಯಮ ಪ್ರತಿನಿಧಿಗಳ ಸಹಭಾಗಿತ್ವದಲ್ಲಿ  ಹೊಸ ಶಾಖೆಗಳನ್ನು ತೆರೆಯಲು ವಾಣಿಜ್ಯ ಬ್ಯಾಂಕುಗಳು ಪ್ರಯತ್ನಿಸುತ್ತಿವೆ. ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳು ಭಾರತೀಯ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿರಿಸಿದ್ದು, ಹೆಚ್ಚು ಹೆಚ್ಚು ಜನರು ಈ ಸೇವಾ ವ್ಯಾಪ್ತಿಯಡಿ ಬರುತ್ತಿದ್ದಾರೆ ಎಂದು ಸೇನ್ ಹೇಳಿದ್ದಾರೆ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 53 ಹೊಸ ಶಾಖೆಗಳನ್ನು ಪ್ರಾರಂಭಿಸಲು ಈಗಾಗಲೇ  ‘ಆರ್‌ಬಿಐ’ನಿಂದ ಅನುಮತಿ ಪಡೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry