ಬುಧವಾರ, ಅಕ್ಟೋಬರ್ 16, 2019
22 °C

73 ಜಿಂಕೆ ಕೊಂಬು ವಶ: ವ್ಯಕ್ತಿ ಸೆರೆ

Published:
Updated:

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಮಹಾಲಿಂಗನಕಟ್ಟೆಯ ತೋಟದ ಮನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಪೊಲೀಸರು 73 ಜಿಂಕೆ ಕೊಂಬು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.ಲೊಕ್ಕನಹಳ್ಳಿ ಶಿವಣ್ಣ ಬಂಧಿತ. ಆರೋಪಿಯು ಜಿಂಕೆ ಹತ್ಯೆ ಮಾಡಿ ಕೊಂಬು ಸಂಗ್ರಹಿಸಿದ ಬಗ್ಗೆ ಶಂಕಿಸಲಾಗಿದೆ. 65 ಕೆಜಿ ತೂಕದ ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾ ಲಯಕ್ಕೆ ಆರೋಪಿ ಹಾಜರು ಪಡಿಸಲಾಗಿದೆ.

Post Comments (+)