ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

74 ರನ್‌ಗೆ ಪಂಜಾಬ್‌ ಸರ್ವಪತನ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಕ್ಕೆ ಕಾರಣವಾಗಿದ್ದ ರೋಷನರ ಅಂಗಳದಲ್ಲಿ ನಡೆದ ದೆಹಲಿ ಎದುರಿನ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಪಂಜಾಬ್‌ 26.4 ಓವರ್‌ಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 74 ರನ್‌ಗೆ ಆಲ್‌ ಔಟ್‌ ಆಗಿದೆ. ಇದೇ ಕ್ರೀಡಾಂಗಣದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ವಿದರ್ಭ ಪ್ರಥಮ ಇನಿಂಗ್ಸ್‌ನಲ್ಲಿ 88 ರನ್‌ಗೆ ಸರ್ವಪತನ ಕಂಡಿತ್ತು.

ಈ ಪಂದ್ಯದ ವೇಳೆ ಪಿಚ್‌ ಸಾಕಷ್ಟು ಪುಟಿಯುತ್ತಿತ್ತು. ಇದು ವಿವಾ ದಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆಗ 28 ನಿಮಿಷಗಳ ಆಟ ಸ್ಥಗಿತಗೊಂಡಿತ್ತು. ಈಗ ಪಂಜಾಬ್‌ ಅಲ್ಪ ಮೊತ್ತಕ್ಕೆ ಕುಸಿದಿದ್ದು, ‘ಬ್ಯಾಟ್ಸ್‌ಮನ್‌ಗಳು ಕಳಪೆ ಆಟವಾಡಿದರು’ ಎಂದು ಪಂಜಾಬ್‌ ಕೋಚ್‌್ ಭೂಪಿಂದರ್‌ ಸಿಂಗ್ ಹೇಳಿದ್ದಾರೆ. ದೆಹಲಿ ಭಾನುವಾರದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 46 ರನ್‌ ಕಲೆ ಹಾಕಿದೆ.

ವಿದರ್ಭ ಎದುರಿನ ಪಂದ್ಯ ವಿವಾ ದಕ್ಕೆ ಕಾರಣವಾಗಿದ್ದರಿಂದ ರಣಜಿಯ ಉಳಿದ ಪಂದ್ಯಗಳಲ್ಲಿ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಡಿಸುವುದಾಗಿ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಹೇಳಿತ್ತು. ಆದರೆ, ಕೊನೆಯಲ್ಲಿ ಬದಲಾವಣೆ ಮಾಡಿ ಮತ್ತೆ ರೋಷನರ ಅಂಗಳದಲ್ಲಿಯೇ ಪಂದ್ಯಗಳನ್ನು ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT