78 ಲಕ್ಷ ನಗದು ವಶ: 27 ಮಂದಿ ಬಂಧನ

7

78 ಲಕ್ಷ ನಗದು ವಶ: 27 ಮಂದಿ ಬಂಧನ

Published:
Updated:

ಮಂಗಳೂರು: ತೆರಿಗೆ ವಂಚಿಸಿ ಹಣ ಚಲಾವಣೆ ಮಾಡುತ್ತಿದ್ದ ಭಾರಿ ಹವಾಲ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಮಂಗಳೂರು  ಪೊಲೀಸರು, ಈ ಸಂಬಂಧ 28 ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳಿಂದ ಒಟ್ಟು ರೂ 78.69 ಲಕ್ಷ ನಗದು, 18 ಬೈಕ್ ಹಾಗೂ 28 ಮೊಬೈಲ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ನಗರದ ಕೊಡಿಯಾಲಗುತ್ತು ಭಗವತಿ ನಗರದ ಸುರೇಶ್ ಮನೆಯಲ್ಲಿ ಹವಾಲ ಹಣ ಚಲಾವಣೆ ಆಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಬರ್ಕೆ ಠಾಣೆ ಹಾಗೂ ನಗರ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿದ್ದರು.`ತೆರಿಗೆ ವಂಚಿಸಿ ಹಣ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ 27 ಮಂದಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ~ ಎಂದು ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್  `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry