79ಕ್ಕೆ ಕಾಲಿಟ್ಟ ಪ್ರಧಾನಿ ಸಿಂಗ್: ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ

ಸೋಮವಾರ, ಮೇ 27, 2019
23 °C

79ಕ್ಕೆ ಕಾಲಿಟ್ಟ ಪ್ರಧಾನಿ ಸಿಂಗ್: ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ

Published:
Updated:

ನ್ಯೂಯಾರ್ಕ್ (ಐಎಎನ್‌ಎಸ್): ಒಂದು ವಾರದಿಂದಲೂ ಅಮೆರಿಕ ಪ್ರವಾಸದಲ್ಲಿನ ನಿರಂತರ ಕಾರ್ಯಕ್ರಮಗಳಲ್ಲಿ ಮಗ್ನರಾಗಿರುವ ಪ್ರಧಾನಿ ಮನಮೋಹನ ಸಿಂಗ್ ಭಾನುವಾರ ಮಧ್ಯಾಹ್ನ ಪುಟ್ಟದೊಂದು ವಿರಾಮ ಪಡೆದರು. ಆದರೆ ಇದು ಎಂದಿನ ವಿರಾಮವಾಗಿರದೆ ವಿಶೇಷವಾಗಿತ್ತು. ಕಾರಣ ಅವರು ಸೋಮವಾರ 79ನೇ ವರ್ಷಕ್ಕೆ ಕಾಲಿಡಲಿದ್ದರು. ಅದಕ್ಕೆ ಪೂರಕ ಎಂಬಂತೆ ಕೆಲ ಗಂಟೆಗಳ ಮುನ್ನವೇ ಅವರು ತಮ್ಮ ಜನ್ಮದಿನದ ಸಂತೋಷವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡರು.ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರಧಾನಿಯವರನ್ನು ಭಾನುವಾರ ಬೆಳಿಗ್ಗೆ 11 ಗಂಟೆಗೆ ಭೇಟಿಯಾಗಿದ್ದರು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಭೆಯಲ್ಲಿ ಭಾಗವಹಿಸುವ ಪೂರ್ವಭಾವಿಯಾಗಿ ಮತ್ತು 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಈ ಭೇಟಿಯಲ್ಲಿ ಚರ್ಚಿಸಿದರು ಎಂದೇ ಎಲ್ಲರೂ ಭಾವಿಸಿದ್ದರು.ಆದರೆ ಸಿಂಗ್ ಅವರು ಮುಖರ್ಜಿ ಅವರೊಂದಿಗೆ ಒಂದು ಗಂಟೆಕಾಲ ಚರ್ಚಿಸಿದ ನಂತರ ಪೂರ್ಣ ಬಿಡುವು ಮಾಡಿಕೊಂಡರು. ಪತ್ನಿ ಗುರುಶರಣ್ ಕೌರ್, ಪುತ್ರಿಯರಾದ ಉಪಿಂದರ್ ಸಿಂಗ್ ಮತ್ತು ಅಮೃತಾ ಸಿಂಗ್, ಮೊಮ್ಮಕ್ಕಳು ಹಾಗೂ ಕುಟುಂಬದ ಆಪ್ತರೊಂದಿಗೆ ಬೆರೆತರು. ನ್ಯೂಯಾರ್ಕ್‌ನ ವೈಭವೋಪೇತ ಮ್ಯಾನ್‌ಹಟನ್ಸ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಂತೋಷ ಕೂಟದಲ್ಲಿ ಭಾಗಿಯಾದರು. ಅವರ ಮತ್ತೊಬ್ಬ ಪುತ್ರಿ ದಾಮನ್ ಸಿಂಗ್ ದೆಹಲಿಯಿಂದಲೇ ದೂರವಾಣಿ ಕರೆ ಮೂಲಕ ತಂದೆಗೆ ಶುಭಾಶಯ ಕೋರಿದರು.ರಾತ್ರಿ ಒಂಬತ್ತು ಗಂಟೆಯವರೆಗೂ ಕುಟುಂಬದ ಸದಸ್ಯರೊಂದಿಗೆ ಸಿಂಗ್ ಆರಾಮವಾಗಿ ಕಾಲ ಕಳೆದರು. ಸಿಂಗ್ ಅವರು ಎಂದೂ ಕೂಡಾ ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಈ ರೀತಿ ಕುಟುಂಬದ ಜೊತೆ ಕಾಲ ಕಳೆದ್ದ್ದದೇ ಇಲ್ಲ. ಇದರಿಂದಾಗಿ ಭಾನುವಾರದ ಈ ಚಟುವಟಿಕೆ  ಅವರ ಸಚಿವಾಲಯದ ಸಿಬ್ಬಂದಿಗೆ ಕೊಂಚ ಅಚ್ಚರಿಯನ್ನೇ ಮೂಡಿಸಿತ್ತು.ನಿಖರ ಜನ್ಮದಿನವೇ ಗೊತ್ತಿಲ್ಲ!

ತಮ್ಮ ಎಂಟು ವರ್ಷಗಳ ಪ್ರಧಾನಿ ಹುದ್ದೆಯ ಅವಧಿಯಲ್ಲಿ ನಾಲ್ಕನೇ ಬಾರಿಗೆ ಅವರು ತಮ್ಮ ಜನ್ಮದಿನವನ್ನು ಭಾರತದಿಂದ ಹೊರಗೆ ಆಚರಿಸಿಕೊಂಡಂತಾಗಿದೆ.ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ ಪ್ರಧಾನಿ ಸಿಂಗ್ ಅವರಿಗೆ ತಮ್ಮ  ನಿಖರವಾದ ಜನ್ಮದಿನ ಯಾವುದೆಂಬುದು ಇನ್ನೂ ತಿಳಿದೇ ಇಲ್ಲ! ಈಗಿನ ಪಾಕಿಸ್ತಾನದಲ್ಲಿರುವ ಗಹ್‌ನಲ್ಲಿ ಸೆಪ್ಟೆಂಬರ್ 26ರಂದು ಸಿಂಗ್ ಜನಿಸಿದ್ದಾಗಿ ಅವರ ಶಾಲಾ ದಾಖಲಾತಿಗಳು ಹೇಳುತ್ತವೆ.2004ರಲ್ಲಿ ಪ್ರಧಾನಿಯಾದ ಮೊದಲ ವರ್ಷದಲ್ಲಿ ಅವರು ನ್ಯೂಯಾರ್ಕ್‌ನಿಂದ ಜಿನೆವಾಕ್ಕೆ ಬರುವಾಗ ಏರ್ ಇಂಡಿಯಾದ ಬೋಯಿಂಗ್ ವಿಮಾನದಲ್ಲಿಯೇ ಅವರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಆ ಸಮಯದಲ್ಲಿ ಅವರು ತಮ್ಮ ಜನ್ಮದಿನಾಚರಣೆಗಾಗಿ ವಿಮಾನದಲ್ಲಿ ತರಲಾಗಿದ್ದ ಕೇಕ್ ಅನ್ನು ಕತ್ತರಿಸಿರಲಿಲ್ಲ.`ನನಗೆ ನಿಜವಾಗಿಯೂ ನನ್ನ ಜನ್ಮದಿನ ಯಾವುದೆಂಬುದೇ ಗೊತ್ತಿಲ್ಲ. ಶಾಲಾ ದಾಖಲಾತಿಗಳಲ್ಲಿ ಏನಿದೆಯೋ ಅದೇ ಇಂದಿಗೂ ಮುಂದುವರಿದಿದೆ~ ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry