ಮಂಗಳವಾರ, ಮೇ 18, 2021
23 °C

8 ಲಕ್ಷ ಮೌಲ್ಯದ ಹತ್ತಿ ನಕಲಿ ಬೀಜ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹತ್ತಿ ನಕಲಿ ಬೀಜ ತಯಾರಿಕೆ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 8 ಲಕ್ಷ ಮೌಲ್ಯದ ಹತ್ತಿ ಬೀಜ ವಶಪಡಿಸಿಕೊಂಡ ಘಟನೆ ರಾಯಚೂರು ತಾಲ್ಲೂಕಿನ ಗುಂಡ್ರವೇಲಿಯಲ್ಲಿ ನಡೆದಿದೆ.ಆರೋಪಿಗಳಾದ ಕುರುಬರ ಭೀಮಣ್ಣ, ಐಜಾಪುರ ವೆಂಕಟೇಶ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಟ್ಟಣದ ಮೇಲೆ ಪ್ರಸಿದ್ಧ ಕಂಪೆನಿಯ ಹೆಸರನ್ನು ಮುದ್ರಿಸಿ ಸ್ಥಳೀಯ ಹತ್ತಿ ಬೀಜವನ್ನೇ ಕಂಪೆನಿ ಬೀಜ ಎಂದು ಇವರು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಹತ್ತಿ ಬೀಜ, ಸೀಲಿಂಗ್ ಯಂತ್ರ, ಸುಮಾರು ಮೂರು ಸಾವಿರ ಖಾಲಿ ಪೊಟ್ಟಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯರಗೇರಾ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ವೈ.ಎಸ್ ಏಗನಗೌಡರ ದಾಳಿ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.