ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಸಾವಿರ ಮೌಲ್ಯದ ಕಳ್ಳಬಟ್ಟಿ ಸಾಮಗ್ರಿ ನಾಶ

Last Updated 17 ಸೆಪ್ಟೆಂಬರ್ 2011, 8:10 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹುಲ್ಯಾನೂರ ಗ್ರಾಮದ ಅರಣ್ಯದಲ್ಲಿ ಹಾಗೂ ಕಾರಾಂವಿ ಗ್ರಾಮದ ಅರಣ್ಯದಲ್ಲಿ ಬೆಳಗಾವಿ ಉತ್ತರ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ ಪೊಲೀಸ್ ಉಪಾಧೀಕ್ಷಕ ಪಿ ಎ. ಕೊರವಾರ ನೇತೃತ್ವದಲ್ಲಿ ಶುಕ್ರವಾರ ದಾಳಿ ನಡೆಸಿ 2 ಸಾವಿರ ಲೀಟರ್ ಕೊಳೆ ಹಾಗೂ 4 ಭಟ್ಟಿ ಸಲಕರಣೆ ಸೇರಿದಂತೆ 80,800 ರೂಪಾಯಿ ಮೌಲ್ಯದ ವಸ್ತುಗಳನ್ನು ನಾಶಪಡಿಸಲಾಯಿತು.

ವಿಶೇಷ ಪೊಲೀಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಬೆಳಗಾವಿಯ ಪೊಲೀಸ್ ನಿರೀಕ್ಷಕ ಎಸ್.ಎಂ. ತಹಸೀಲ್ದಾರ ಹಾಗೂ ಸಿಬ್ಬಂದಿ, ವಿಶೇಷ ಪೊಲೀಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಗೋಕಾಕ ಪೊಲೀಸ್ ನಿರೀಕ್ಷಕ ಬೂದಿಗೊಪ್ಪ ಮತ್ತು ಸಿಬ್ಬಂದಿ, ಮಾರಿಹಾಳ ಪೊಲೀಸ್ ಠಾಣೆ ಪಿಎಸ್‌ಐ ಜ್ಯೋತಿರ್ಲಿಂಗ ಹೊನ್ನಕಟ್ಟಿ ಹಾಗೂ ಸಿಬ್ಬಂದಿ,  ಕಾಕತಿ ಪೊಲೀಸ್ ಠಾಣೆ ಪಿಎಸ್‌ಐ ಪ್ರಲ್ಹಾದ ಚನ್ನಗೀರಿ ಹಾಗೂ ಸಿಬ್ಬಂದಿ, ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ರವಿ ಮುರಗೋಡ ಹಾಗೂ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ಪಿ.ಎನ್. ಪಾಟೀಲ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ದಾಳಿ ನಡೆಸಿ ಕಳ್ಳಭಟ್ಟಿ ಸಾಮಗ್ರಿಗಳನ್ನು ನಾಶಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT