8000 ಲಕ್ಷ ಡಾಲರ್ ಪರಿಹಾರ: ಮಾಲ್ದೀವ್ಸ್ ಗೆ ಜಿಎಂಆರ್ ಪತ್ರ

7

8000 ಲಕ್ಷ ಡಾಲರ್ ಪರಿಹಾರ: ಮಾಲ್ದೀವ್ಸ್ ಗೆ ಜಿಎಂಆರ್ ಪತ್ರ

Published:
Updated:

ಮಾಲೆ (ಪಿಟಿಐ): ತನ್ನ ವಿಮಾನ ನಿಲ್ದಾಣ ಒಪ್ಪಂದವನ್ನು ರದ್ದು ಪಡಿಸಿದ್ದಕ್ಕಾಗಿ 8000 ಲಕ್ಷ ಡಾಲರ್ ಪರಿಹಾರವನ್ನು ನೀಡುವಂತೆ ಮಾಲ್ದೀವ್ಸ್ ನ್ನು  ಭಾರತದ ಮೂಲಸವಲತ್ತು ಸಂಸ್ಥೆ ಜಿಎಂಆರ್ ಆಗ್ರಹಿಸಿದೆ.ಆದರೆ ಜಿಎಂಆರ್ ವೆಚ್ಚ ಮಾಡಿರುವ ಹಣ ನೈಜ ವೆಚ್ಚದ ಅರ್ಧಕ್ಕಿಂತಲೂ ಕಡಿಮೆ ಎಂಬ ಭಾವನೆ ತನ್ನದಾಗಿರುವುದರಿಂದ ಜಿಎಂಆರ್ ಲೆಕ್ಕಾಚಾರವನ್ನು ಫಾರೆನ್ಸಿಕ್ ಆಡಿಟ್ ಗೆ  (ವಿಧಿಬದ್ಧ ಆಡಿಟ್) ಒಪ್ಪಿಸಲು ಮಾಲೆ ಪಟ್ಟು ಹಿಡಿದಿದೆ.'ನಮಗೆ ನೀಡಬೇಕಾಗಿರುವ ಪರಿಹಾರ ಮೊತ್ತ 8000 ಲಕ್ಷ ಡಾಲರ್ ಗಳಿಂದತಲೂ ಹೆಚ್ಚು ಎಂಬುದಾಗಿ ಸೂಚಿಸಿ ನಾವು ಮಾಲ್ದೀವ್ಸ್ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇದು ನಮ್ಮ ಪ್ರಾಥಮಿಕ ಅಂದಾಜು ಮಾತ್ರ. ವಿವಿಧ ಲೆಕ್ಕಾಚಾರಗಳು, ಲಾಭನಷ್ಟ ಇತ್ಯಾದಿಗಳನ್ನು ಪರಿಗಣಿಸಿ ಅಂತಿಮ ಮೊತ್ತ ಲೆಕ್ಕ ಹಾಕಲಾಗುವುದು' ಎಂದು ಜಿಎಂಆರ್ (ವಿಮಾನ ನಿಲ್ದಾಣಗಳು) ಸಿಎಫ್ ಒ ಸಿದ್ಧಾರ್ಥ ಕಪೂರ್ ಹೇಳಿದರು.ಏನಿದ್ದರೂ ಮಾಲ್ದೀವ್ಸ್ ಸರ್ಕಾರ ಜಿಎಂಆರ್ ಲೆಕ್ಕಾಚಾರವನ್ನು ನಿರ್ಲಕ್ಷಿಸಿ, ಅಂತರರಾಷ್ಟ್ರೀಯ ಸಂಸ್ಥೆಯ ಮೂಲಕ ಫಾರೆನ್ಸಿಕ್ ಆಡಿಟ್ ಮಾಡಿಸುವ ವಿಚಾರ ಮುಂದಿಟ್ಟಿದೆ.'ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಿಎಂಆರ್ ಖಜಾನೆಗೆ ಎಷ್ಟು ಹಣ ಹೋಗಿದೆ ಮತ್ತು ಎಷ್ಟು ಹಣವನ್ನು ಇಲ್ಲಿಗಾಗಿ ವೆಚ್ಚ ಮಾಡಲಾಗಿದೆ ಎಂಬುದನ್ನು ತಿಳಿಯಲು ಫಾರೆನ್ಸಿಕ್ ಆಡಿಟ್ ನಡೆಸುತ್ತೇವೆ. ನಮಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಜಿಎಂಆರ್ ಬ್ಯಾಂಕ್ ಒಂದರ ಮೂಲಕ ತಾನು ಪಡೆದ 3500 ಲಕ್ಷ ಡಾಲರ್ ಹಣದಲ್ಲಿ  1500 ಲಕ್ಷ ಡಾಲರ್ ಹಣವನ್ನು ಮಾತ್ರವೇ ನಗದೀಕರಿಸಿದೆ' ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ವಹೀದ್ ಅವರ ಪತ್ರಿಕಾ ಕಾರ್ಯದರ್ಶಿ ಮಸೂದ್ ಇಮಾದ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry