82 ವಸಂತ ಪೂರೈಸಿದ ಲತಾ ಮಂಗೇಶ್ಕರ್

7

82 ವಸಂತ ಪೂರೈಸಿದ ಲತಾ ಮಂಗೇಶ್ಕರ್

Published:
Updated:
82 ವಸಂತ ಪೂರೈಸಿದ ಲತಾ ಮಂಗೇಶ್ಕರ್

ಮುಂಬೈ (ಪಿಟಿಐ): ತಮ್ಮ ಇಂಪಾದ ಧ್ನನಿಯ ಹಾಡುಗಾರಿಕೆಯಿಂದ ಏಳು ದಶಕಗಳಿಂದ ತಲೆಮಾರುಗಳ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಹಾಡುಗಾರ್ತಿ ಲತಾ ಮಂಗೇಶ್ಕರ್ ಅವರು ಬುಧವಾರ 82 ವಸಂತಗಳನ್ನು ಪೂರೈಸಿದರು.

ಭಾರತದ ಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಅವರು, ಇದುವರೆಗೆ ಒಟ್ಟು 30,000 ಹಾಡುಗಳನ್ನು ಹಾಡಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಶಾಂತಿಯಲ್ಲಿ ಕಳೆಯಬೇಕೆಂದಿರುವ ಅವರು ದಿನವಿಡೀ ಮನೆಯಲ್ಲಿದ್ದು ಸಂಜೆ  ಹೃದಯನಾಥ್ ಪ್ರತಿಭಾ ಪುರಸ್ಕಾರ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

1942ರಲ್ಲಿ ಮರಾಠಿಯಲ್ಲಿ ಹಾಡಲು ಪ್ರಾರಂಭಿಸಿದ ಲತಾ ಮಂಗೇಶ್ಕರ್ ಅವರು, 1946ರಲ್ಲಿ ವಸಂತ ಜಾವಡೇಕರ್ ಅವರ ~ಆಪ್ ಕಿ ಸೇವಾ ಮೇ~ ಹಿಂದಿ ಚಲನಚಿತ್ರದಲ್ಲಿ ~ಪಾ ಲಾಗೂನ್ ಕರ್ ಜೋರಿ~ ಹಾಡಿನೊಂದಿಗೆ ಹಿಂದಿ ಚಲನಚಿತ್ರರಂಗಕ್ಕೆ ಕಾಲಿರಿಸಿದರು. ಅವರು ಇದುವರೆಗೆ ಸಾವಿರಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಿಗೆ ಹಿನ್ನೆಲೆಗಾಯಕಿಯಾಗಿ ಹಾಡಿದ್ದಾರೆ. ಜೊತೆಗೆ 36 ಪ್ರಾದೇಶಿಕ ಭಾಷೆಗಳ ಹಾಗೂ ವಿದೇಶಿ ಭಾಷೆಗಳ ಚಲನಚಿತ್ರಗಳಲ್ಲೂ ಹಾಡಿದ್ದಾರೆ.

ಭಾರತರತ್ನ ಪ್ರಶಸ್ತಿ ಪುರಸ್ಖೃತ ಲತಾ ಮಂಗೇಶ್ಕರ್ ಅವರು, ಹಿಂದಿ ಸಿನಿಮಾ ರಂಗದ ಹಳೆತಲೆಮಾರಿನ ನಾಯಕ ನಟಿ ಮಧುಬಾಲಾ ಮತ್ತು ಈಚೆಗಿನ ನಟಿ ಕಾಜೋಲ್ ವರೆಗಿನ ನಟಿಯರಿಗೆ ಹಿನ್ನೆಲೆಗಾಯಕಿಯಾಗಿ ದಾಖಲೆ ಮಾಡಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ಅವರು, ~ನನಗೆ ಕೇಕ್ ಕತ್ತರಿಸುವಲ್ಲಿ ಆಸಕ್ತಿಯಿಲ್ಲ. ಇದು ಕೌಟುಂಬಿಕ ಹಬ್ಬ, ನನ್ನ ಇಂದಿನ ಯಶಸ್ಸು, ಬೆಳವಣಿಗೆಗೆ ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳು ಕಾರಣ~ ಎಂದಿದ್ದಾರೆ, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಿಂದಿ ಚಿತ್ರರಂಗದ ಹಲವಾರು ಗಣ್ಯರು ಅವರಿಗೆ ಶುಭ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry