ಬುಧವಾರ, ಏಪ್ರಿಲ್ 21, 2021
25 °C

9ರಿಂದ ಆನ್‌ಲೈನ್ ಪರವಾನಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣದ ಪರವಾನಗಿ ಪಡೆಯಲು ಆನ್‌ಲೈನ್ ವ್ಯವಸ್ಥೆಯು ಮಾ.9ರಿಂದ ಜಾರಿಗೆ ಬರಲಿದೆ. ನ್ಯೂ ಇಂಟಿಗ್ರೇಟೆಡ್ ಕ್ಲಿಯರೆನ್ಸ್ ವ್ಯವಸ್ಥೆಯ ಮೂಲಕ ವಿಳಂಬವಿಲ್ಲದೇ 20 ದಿನಗಳಲ್ಲಿ ಪರವಾನಗಿ ನೀಡಲಾಗುವುದು ಎಂದು ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್ ಅವರು ಹೇಳಿದರು.ಗುಲ್ಬರ್ಗದಲ್ಲಿ ಗುರುವಾರ ಕಟ್ಟಡ ನಿರ್ಮಾಣಕಾರರು, ಕಟ್ಟಡ ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಈಗ 350 ಕಟ್ಟಡ ನಿರ್ಮಾಣ ಪರವಾನಿಗೆಯ ಅರ್ಜಿಗಳು ಬಾಕಿ ಇದೆ. ಹೊಸ ಆನ್‌ಲೈನ್ ವ್ಯವಸ್ಥೆ ಜಾರಿಯಾದ ಕೂಡಲೇ ಈ  ಅರ್ಜಿಗಳು ಇತ್ಯರ್ಥವಾಗಲಿವೆ. ಇದಕ್ಕಾಗಿ ನಗರ ಯೋಜನಾ ಪ್ರಾಧಿಕಾರದಿಂದ ಅಗತ್ಯವಾದ ದೃಢೀಕೃತ ಪ್ರಮಾಣಪತ್ರಗಳನ್ನು ಕೂಡಲೇ ಒದಗಿಸಬೇಕೆಂದು ಸೂಚಿಸಿದರು.ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಿಸುವವರು, ಶಿಲ್ಪಜ್ಞರು ಮತ್ತು ಎಂಜಿನಿಯರುಗಳು ನಿಯಮಾವಳಿಯ ಪ್ರಕಾರ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಪೂರ್ಣ ಪ್ರಮಾಣದ ದಾಖಲೆಗಳಿದ್ದಾಗ ಮಾತ್ರ ಪ್ರಸ್ತಾವನೆ ಸಲ್ಲಿಸಬೇಕು. ಅಪೂರ್ಣ ಪ್ರಸ್ತಾವನೆಗಳನ್ನು ಸಲ್ಲಿಸಬಾರದು. ಅದೇ ರೀತಿ ಮಹಾನಗರ ಪಾಲಿಕೆಯ ಕಟ್ಟಡ ನಿರ್ಮಾಣಕ್ಕೆ ನೀಡಿದ ಪರವಾನಿಗೆಯ ಪ್ರಕಾರವೇ ಕಟ್ಟಡಗಳನ್ನು ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಿಸಬಾರದು ಎಂದರು.  ಮಧ್ಯವರ್ತಿಗಳ ಮೂಲಕ ಪ್ರಸ್ತಾವನೆಗಳನ್ನು ಸಲಿಸ್ಲುವ ಬದಲಾಗಿ ತಾವು ನಿರ್ಮಾಣಕಾರರು, ಎಂಜಿನಿಯರ್ ಅಥವಾ ವಾಸ್ತುಶಿಲ್ಪತಜ್ಞರ ಸಂಘದವರು ನೇರವಾಗಿ ಕಟ್ಟಡ ನಿರ್ಮಾಣದ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಇದರಿಂದ ಲಂಚಗುಳಿತನ ಮತ್ತು ಅಕ್ರಮ ಅವ್ಯವಹಾರ ನಡೆಯುವುದು  ಸ್ಥಗಿತಗೊಳ್ಳುವುದು. ಕಟ್ಟಡಗಳ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸುವಾಗ ದೀರ್ಘಕಾಲದ ಯೋಜನೆ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಪ್ರಸ್ತಾವನೆಗಳನ್ನು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಚೆಕ್‌ಲಿಸ್ಟ್ ಪ್ರಕಾರ ಪರಿಶೀಲಿಸಿ ಮಹಾನಗರ ಪಾಲಿಕೆಗೆ ಹಿಂದಿರುಗಿಸಬೇಕು. ಕಟ್ಟಡ ನಿರ್ಮಿಸುವವರು,ಎಂಜಿನಿಯರ್‌ಗಳು ಕಟ್ಟಡ ನಿರ್ಮಾಣದ ಪರವಾನಿಗೆ ಪಡೆಯುವಲ್ಲಿ ಮಹತ್ತರ ಜವಾಬ್ದಾರಿ ವಹಿಸಬೇಕು ಹಾಗೂ ಕಾಯ್ದೆ ಕಾನೂನು ಪ್ರಕಾರ ಕಟ್ಟಡಗಳನ್ನು ನಿರ್ಮಿಸಬೇಕೆಂದರು.ಮಹಾನಗರ ಪಾಲಿಕೆಯ ಆಯುಕ್ತ ಮನೋಜ್ ಜೈನ್, ನಗರ ಯೋಜನಾ ಪ್ರಾಧಿಕಾರ, ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.