ಶನಿವಾರ, ಏಪ್ರಿಲ್ 17, 2021
23 °C

9ರಿಂದ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ಆನೇಕಲ್ ತಾಲ್ಲೂಕಿನ ಎಸ್.ಎಫ್.ಎಸ್. ಶಾಲಾ ಆವರಣದಲ್ಲಿ  20 ಲಕ್ಷ  ರೂಪಾಯಿ ಬಹುಮಾನವನ್ನು ಒಳಗೊಂಡಿರುವ ರಾಷ್ಟ್ರೀಯ ಪುರುಷರ ಮಿಸ್ಟರ್ ಇಂಡಿಯಾ ಮತ್ತು ಮಹಿಳೆಯರ ಮಿಸ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಯು ಏಪ್ರಿಲ್ 9 ಹಾಗೂ 10ರಂದು ನಡೆಯಲಿದೆ.ಪುರುಷ ಮತ್ತು ಮಹಿಳೆಯರಿಗಾಗಿ 55 ಕೆಜಿ ವಿಭಾಗದಿಂದ 100 ಕೆಜಿ ವಿಭಾಗದವರೆಗೆ ಒಟ್ಟು 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದ ಸ್ಪರ್ಧೆಗಳ ನಡುವೆ ಹತ್ತು ನಿಮಿಷಗಳ ಬಿಡುವು ಇರುತ್ತದೆ. ಆಗ ನಾಡಿನ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಕಲಾವಿದರಿಂದ ನೃತ್ಯ ರೂಪಕಗಳು ನಡೆಯಲಿವೆ ಎಂದು ಸಂಘಟನೆಯ  ಕಾರ್ಯದರ್ಶಿ ಶೇ.ಭೋ. ರಾಧಾಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಏಪ್ರಿಲ್ 9ರಂದು ಸಂಜೆ 5.30ಕ್ಕೆ  ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಎ. ನಾರಾಯಣಸ್ವಾಮಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.