ಸೋಮವಾರ, ಮೇ 17, 2021
21 °C

9ಸಾವಿರ ಲೀ. ಮದ್ಯಸಾರ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಳೆದ ವರ್ಷ ಹೆಬ್ರಿಯಲ್ಲಿ ವಶಪಡಿಸಿಕೊಂಡಿದ್ದ ಅಂದಾಜು ರೂ.10 ಲಕ್ಷ ಮೌಲ್ಯದ 9 ಸಾವಿರ ಲೀಟರ್ ಅಕ್ರಮ ಮದ್ಯಸಾರವನ್ನು ಉಡುಪಿ ಅಬಕಾರಿ ಪೊಲೀಸರು ಶುಕ್ರವಾರ ನಾಶಪಡಿಸಿದರು.ಒಟ್ಟು 252 ಕ್ಯಾನ್‌ಗಳಲ್ಲಿದ್ದ ಮದ್ಯಸಾರವನ್ನು ಮೊದಲು ಅಂಬಲಪಾಡಿಯ ಬಳಿ ಹೊಳೆಗೆ ಹಾಕಿ ನಾಶಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಅಬಕಾರಿ ಇಲಾಖೆಯವರು ವ್ಯಾನ್ ತುಂಬಿಕೊಂಡು ಮಧ್ಯಾಹ್ನ ಬಂದಾಗ ಸ್ಥಳಿಯರು ಅದನ್ನು ವಿರೋಧಿಸಿ ಇಲ್ಲಿ ಎಲ್ಲಿಯೂ ಅದನ್ನು ಸುರಿಯುವುದು ಬೇಡ ಎಂದು ಆಕ್ಷೇಪಿಸಿದರು.ಬಳಿಕ ಅಲ್ಲಿಂದ ಅಲೆಯೂರಿಗೆ ತೆರಳಿದ ಅಬಕಾರಿ ಇಲಾಖೆಯವರು ಅಲ್ಲಿನ ದೆಂದೂರು ಕಟ್ಟೆ ಹೊಳೆಗೆ ಸುರಿದು ಅವನ್ನೆಲ್ಲ ನಾಶಪಡಿಸಿದರು. ಇಲಾಖೆಯ ಉಪಾಯುಕ್ತ ಸೋಮಯ್ಯ, ಉಪ ಅಧೀಕ್ಷಕ ಗುರುಮೂರ್ತಿ, ಇನ್‌ಸ್ಪೆಕ್ಟರ್ ಸೌಮ್ಯಲತಾ, ಎಸ್.ಐ.ನಾರಾಯಣ, ಸಿಬ್ಬಂದಿ ನಾರಾಯಣ, ಸುಧಾಕರ, ರವೀಂದ್ರನಾಥ್, ವೆಂಕಟರಮಣ, ಪುಂಡಲೀಕ್ ಉಪಾಧ್ಯ,  ದಿನೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.