ಗುರುವಾರ , ಅಕ್ಟೋಬರ್ 24, 2019
21 °C

9 ಕೋಟಿ ಬಾಕಿ ಉಳಿಕೆ ಆರೋಪ ಶುದ್ಧ ಸುಳ್ಳು

Published:
Updated:

ರಾಯಚೂರು: ನಗರಸಭೆಯು ಶೇ 22.75ರ ಅನುದಾನವನ್ನು ಖರ್ಚು ಮಾಡದೇ ಸುಮಾರು 9 ಕೋಟಿ ಅನುದಾನವನ್ನು ಬಾಕಿ ಉಳಿಸಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ಹೇಳಿದ್ದಾರೆ.ಕೆಲ ಸಂಘ ಸಂಸ್ಥೆಗಳು ಮಾಡಿರುವ ಆರೋಪಗಳಿಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. 2008-09ರ ಸೇ 22.75ರ ಅನುದಾನದ ಕ್ರಿಯಾ ಯೋಜನೆಯನ್ನು 6-1-2010ರಂದು ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡು ಬಂದಿತ್ತಾದರೂ ಕಾರ್ಯ ರೂಪಕ್ಕೆ ಬರಲಿಲ್ಲ.

 

2ನೇ ಅವಧಿಯ ನನ್ನ ನೇತೃತ್ವದ ಚುನಾಯಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 13-8-2010ರವರೆಗೂ ಖರ್ಚಾಗದೇ ಉಳಿದ 395 ಲಕ್ಷ ರೂಪಾಯಿ ಹಾಗೂ 2010-11ನೇ ಸಾಲಿನ 185 ಲಕ್ಷ ರೂಪಾಯಿಗಳ ವಿವಿಧ ಕಾಂಪೊನೆಂಟ್ ಕ್ರಿಯಾ ಯೋಜನೆಯಡಿ ಲಭ್ಯ ಇರುವ ಹಣವನ್ನು 16 ತಿಂಗಳ ಅವಧಿಯಲ್ಲಿ ಮೂರು ವರ್ಷಗಳ ಶೇ 22.75ರ ಯೋಜನೆ ಅನುದಾನ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.ಒಟ್ಟಾರೆ 2008-09. 2009-2010,2010-2011ನೇ ಸಾಲಿನ ಶೇ 22.75 ಒಟ್ಟು ಅನುದಾನ 586.73 ಲಕ್ಷ. ಅದರಲ್ಲಿ ಖರ್ಚಾಗಿರುವ ಒಟ್ಟು ಮೊತ್ತ 340.14 ಲಕ್ಷ. ಬಾಳಿ ಉಳಿದಿರುವ ಮೊತ್ತ 246.59 ಲಕ್ಷ. ಇದರಲ್ಲಿ 89 ಲಕ್ಷ ಚಾಲ್ತಿಯಲ್ಲಿರುವ ಸಿವಿಲ್ ಕಾಮಗಾರಿಗಳಿಗಾಗಿ ಪ್ರಗತಿಯನ್ನು ಅನುಸರಿಸಿ ಹಣ ಪಾವತಿ ಮಾಡಲಾಗುತ್ತದೆ.ಅಲ್ಲದೇ 65 ಲಕ್ಷ ರೂಪಾಯಿ ಹಣವನ್ನು ಕಚ್ಚಾಪಕ್ಕಾ ಮನೆಗಳಿಗೆ 2ನೇ ಕಂತಿನ ಹಣವಾಗಿ ಖರ್ಚು ಮಾಡಬೇಕಾಗಿದೆ. ಉಳಿದಿುವ ಹಣಕ್ಕೆ ಮತ್ತೊಮ್ಮೆ  ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ವಿನಿಯೋಗಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.2011-12ನೇ ಸಾಲಿನ ಕ್ರಿಯಾ ಯೋಜನೆ ಮೊತ್ತ 273 ಲಕ್ಷ. ನಿಯಮಗಳನುಸಾರ ಮಾರ್ಪಡಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ.  ವಸ್ತು ಸ್ಥಿತಿ ಹೀಗಿರುವಾಗ ಶೇ 22.75ರ ಅನುದಾನದಲ್ಲಿ 9 ಕೋಟಿ ಬಾಕಿ ಉಳಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.ನವೋದಯ ಮೆಡಿಕಲ್ ಕಾಲೇಜಿಗೆ ಕರ ರಿಯಾಯಿತಿ ನೀಡಿ ನಗರಸಭೆ ಆದಾಯಕ್ಕೆ ನಷ್ಟ ತಂದಿದ್ದಾರೆ ಎಂಬ ಆಪಾದನೆಯನ್ನು ಈಗಿನ ಚುನಾಯಿತ ಮಂಡಳಿ ಮೇಲೆ ಮಾಡಲಾಗಿದೆ. ನವೋದಯ ಮೆಡಿಕಲ್ ಕಾಲೇಜಿಗೆ ಕರ ರಿಯಾಯ್ತಿಯನ್ನು 1999-2000ದಲ್ಲಿ ಹಾಗೂ 2003ರಲ್ಲಿ ಮೂರು ಹಂತಗಳಲ್ಲಿ ಕರ ರಿಯಾಯಿತಿ  ಆದೇಶ ನೀಡಲಾಗಿದೆ.  ಈ ಆದೇಶ ನೀಡಿ 10 ವರ್ಷ ಆಗಿದೆ. ಆಗಿನ ಅವಧಿಯಲ್ಲಿ ಯಾರು ಅಧ್ಯಕ್ಷರಿದ್ದರು, ಚುನಾಯಿತ ಮಂಡಳಿ ಯಾವುದಿತ್ತು ಎಂಬುದನ್ನು ಮರೆಮಾಚಿ ಈಗಿನ ಚುನಾಯಿತ ಮಂಡಳಿ ವಿರುದ್ಧ ಆಪಾದನೆ ಮಾಡುತ್ತಿರುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ನೀರಿನ ಸಮಸ್ಯೆ ಇಲ್ಲ. ಸ್ವಚ್ಛತೆಗೆ ಗಮನಹರಿಸಲಾಗಿದೆ.  29 ಶೌಚಾಲಯ ನಿರ್ಮಿಸಲಾಗಿದೆ. ಅವುಗಳೆಲ್ಲ ಉಪಯೋಗದಲ್ಲಿಲ್ಲ. 20 ಶೌಚಾಲಯ ನಿರ್ಮಾಣ ಹಂತದಲ್ಲಿವೆ. ಮೂಲಭೂತ ಸೌಕರ್ಯ ಕಲ್ಪಿಸುವಲಿ ನಗರಸಭೆ ಗಮನಹರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)