9 ಜೋಡಿಗಳ ನಗ್ನ ಲಗ್ನ!

7

9 ಜೋಡಿಗಳ ನಗ್ನ ಲಗ್ನ!

Published:
Updated:

 ಕಿಂಗ್‌ಸ್ಟನ್ (ಜಮೈಕಾ) (ಎಪಿ):   ಜಮೈಕಾದ ಪಶ್ಚಿಮ ಭಾಗದಲ್ಲಿರುವ ನೆಗ್ರಿಲ್ ದ್ವೀಪದ ಕಡಲ ಕಿನಾರೆಯಲ್ಲಿ ವಸ್ತ್ರಗಳ ಬಂಧನದಿಂದ ಮುಕ್ತರಾದ ಒಂಬತ್ತು ಜೋಡಿಗಳು ಸೂರ್ಯ ಸಾಕ್ಷಿಯಾಗಿ ಬುಧವಾರ ವಿವಾಹ ಬಂಧನಕ್ಕೆ ಒಳಗಾದರು.`ಪ್ರೇಮಿಗಳ ದಿನ~ದ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸೆಳೆಯಲು ಇಲ್ಲಿನ ರೆಸಾರ್ಟ್‌ಗಳು `ನಗ್ನ ಮದುವೆ~ ಸ್ಪರ್ಧೆಯನ್ನು ಆಯೋಜಿಸಿದ್ದವು. ಜೊತೆಗೆ ನಾಲ್ಕು ರಾತ್ರಿ ಉಚಿತ ವಾಸ್ತವ್ಯದ ಕೊಡುಗೆ ನೀಡುವುದಾಗಿಯೂ ಪ್ರಚಾರ ಮಾಡಿದ್ದವು.ಈ ಪ್ರಚಾರಕ್ಕೆ ಮನಸೋತ ಅಮೆರಿಕ ಮತ್ತು ಕೆನಡಾದ ನೂರಕ್ಕೂ ಹೆಚ್ಚು ಜೋಡಿಗಳು ಇಲ್ಲಿಗೆ ಲಗ್ಗೆ ಇಟ್ಟವು. ಆದರೆ, 10 ಜೋಡಿಗಳನ್ನು ಮಾತ್ರ ಈ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

 

ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಜೋಡಿ ಮುಹೂರ್ತದ ಹಿಂದಿನ ದಿನ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

 

`ಇದೊಂದು ಸುಂದರ ಅನುಭವ, ಯಕ್ಷಲೋಕದಂತೆಯೇ ಇತ್ತು~ ಎಂಬುದು ನ್ಯೂಜೆರ್ಸಿಯಿಂದ ಆಗಮಿಸಿದ್ದ 39ರ ಹರೆಯದ ಮಿಲ್ಲಿ ಸಾಲ್ಸ್ ಅವರ ಅಭಿಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry