ಭಾನುವಾರ, ಆಗಸ್ಟ್ 9, 2020
21 °C

9 ತಾಸಿನಲ್ಲಿ 17 ಎಕರೆ ಈರುಳ್ಳಿ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

9 ತಾಸಿನಲ್ಲಿ 17 ಎಕರೆ ಈರುಳ್ಳಿ ಬಿತ್ತನೆ

ರೋಣ: ತಾಲ್ಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ತಾಳಿ ಎಂಬ ರೈತ ಗ್ರಾಮದ ಬಸಪ್ಪ ಉಸಲಕೊಪ್ಪ ಎಂಬುವರ ಹೊಲದಲ್ಲಿ ಅವರ ಎತ್ತುಗಳಿಂದ ಕೇವಲ 9 ತಾಸಿನಲ್ಲಿ 17 ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂಥ ಸಾಹಸಗಳು ವಿದ್ಯಾವಂತ ಯುವಕರಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸಲು ಸಹಾಯಕವಾಗಿದೆ ಎಂದು ಹೇಳಿದರು.ಬೆಳಿಗ್ಗೆ 6 ಗಂಟೆಗೆ ಕಾರ್ಮಿಕರೊಂದಿಗೆ ಸೇರಿಕೊಂಡು ಸಾಧನೆಗೆ ಇಳಿದ ಅಯ್ಯಪ್ಪ, ನಿರಂತರವಾಗಿ 17 ತಾಸು ಬಿತ್ತನೆ ಕಾರ್ಯ ಮಾಡಿದರು. ನಂತರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.ಗ್ರಾಮದ ಹಿರಿಯರಾದ ಪಕ್ಕಪ್ಪ ತಾಳಿ, ವೈ.ಕೆ. ಕುರಿ, ಮುದಕಪ್ಪ ನಿಶ್ಯಾನಿ, ಬಾಳಪ್ಪ ಕಾಶಪ್ಪನವರ, ಎಚ್.ಎಂ.  ತಾಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.