9 ತಿಂಗಳಲ್ಲಿ 69 ಹುಲಿಗಳ ಸಾವು

7

9 ತಿಂಗಳಲ್ಲಿ 69 ಹುಲಿಗಳ ಸಾವು

Published:
Updated:

ನವದೆಹಲಿ (ಐಎಎನ್‌ಎಸ್):  `ದೇಶದಲ್ಲಿ ಕಳೆದ 9 ತಿಂಗಳಿನಲ್ಲಿ ಕನಿಷ್ಠ 69 ಹುಲಿಗಳು ಸಾವನ್ನಪ್ಪಿವೆ~ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶುಕ್ರವಾರ ತಿಳಿಸಿದೆ.`ಜನವರಿಯಿಂದ ಸೆಪ್ಟೆಂಬರ್‌ವರೆಗೆ  ದೇಶದ 41 ಹುಲಿ ಧಾಮಗಳಲ್ಲಿ ಕನಿಷ್ಠ 69 ಹುಲಿಗಳು ಮೃತಪಟ್ಟಿವೆ. ಇವುಗಳಲ್ಲಿ 41 ಹುಲಿಗಳು ಕಳ್ಳಬೇಟೆಗೆ ಹಾಗೂ 28 ಹುಲಿಗಳು  ಅಪಘಾತಕ್ಕೆ ಬಲಿಯಾಗಿವೆ~ ಎಂದು ಎನ್‌ಟಿಸಿಎ ಸಹಾಯಕ ಎಐಜಿ ರಾಜೀವ್ ಶರ್ಮ  ತಿಳಿಸಿದ್ದಾರೆ.ಉತ್ತರಾಖಂಡ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಮೃತಪಟ್ಟಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಇದೀಗ ಕೇವಲ 1,706 ಹುಲಿಗಳು ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry