9 ಸರ್ಕಾರಿ ಶಾಲೆ ಬಂದ್

ಗುರುವಾರ , ಜೂಲೈ 18, 2019
24 °C

9 ಸರ್ಕಾರಿ ಶಾಲೆ ಬಂದ್

Published:
Updated:

ಅರಸೀಕೆರೆ: ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆಯಿಂದ ಒಂಬತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಬಿಇಓ ಎನ್.ಜಿ.ಬಸವರಾಜ್ ತಿಳಿಸಿದ್ದಾರೆ.ಈಚೆಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು,  ಐದಕ್ಕೂ ಕಡಿಮೆ ವಿದ್ಯಾರ್ಥಿಗಳಿಗಿರುವ ಶಾಲೆಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.ತಾಲ್ಲೂಕಿನ ತಾವರೇಹಳ್ಳಿ ಕಿರಿಯ ಪ್ರಾಥಮಿಕ ಶಾಲೆ, ಕುಂಬಾರಘಟ್ಟೆ, ಚಿಕ್ಕೊಂಡಿಹಳ್ಳಿ, ವಾಲೇಹಳ್ಳಿ-ಭೈರಾಪುರ, ನಂಜನಾಯಕನಕೊಪ್ಪಲು, ಹೆಬ್ಬಾರನಹಳ್ಳಿ, ಜಿನಕೆರೆಹಳ್ಳಿ, ಮೈಲನಹಳ್ಳಿ, ಅಜ್ಜನಹಳ್ಳಿ ಶಾಲೆಗಳನ್ನು ಮುಚ್ಚಲಾಗಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಉಚಿತ ಬಿಸಿಯೂಟ, ಪಠ್ಯ-ಪುಸ್ತಕ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್  ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೀಗ್ದ್ದಿದರೂ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಸೈಕಲ್, ಸಮವಸ್ತ್ರ ಬಂದಿಲ್ಲ: ಮೇ 30ರಿಂದ ಶಾಲೆಗಳು ಆರಂಭಗೊಂಡಿವೆ. ಈವರೆವಿಗೂ ಸೈಕಲ್, ಸಮವಸ್ತ್ರ ಸರಬರಾಜಾಗಿಲ್ಲ. ಸೈಕಲ್, ಸಮವಸ್ತ್ರ ಸರಬರಾಜು ಮಾಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನೊಂದು ವಾರದಲ್ಲಿ ಬರವ ನಿರೀಕ್ಷೆ ಇದೆ ಎಂದು ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry