ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಕಳವು ಮಾಲು ವಶ,8 ಆರೋಪಿಗಳ ಸೆರೆ

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಪೊಲೀಸರು 9 ಕಳವು ಪ್ರಕರಣ ಪತ್ತೆ ಮಾಡಿ 8 ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಕಳವು ಮಾಲು ಮತ್ತು 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಸರೀಕಟ್ಟೆ ಸಮೀಪದ ಕಲ್ಲುಕ್ವಾರಿಯ ಕುಮಾರ್, ಸಂಗಡಿಗರಾದ ಮೋಹನ, ಗಣೇಶ, ಜಗದೀಶ            (ಜಗ್ಗ), ಉಮೇಶ್ (ರೆಡ್ಡಿ) ಮತ್ತು ಮೈಸೂರಿನ ರವಿಯನ್ನು ಬಂಧಿಸಿರುವ ಪೊಲೀಸರು, 50ಕ್ಕೂ ಅಧಿಕ ಬ್ಯಾಟರಿಗಳು, ಕಳುವು ಮಾಡಲು ಬಳಸುತ್ತಿದ್ದ ಮಾರುತಿ ಅಮ್ನಿ ಮತ್ತು ಮಹೇಂದ್ರ ಪಿಕಪ್ ವಾಹನ ವಶಪಡಿಸಿ          ಕೊಂಡಿದ್ದಾರೆ.

2010ರ ಆಕ್ಟೋಬರ್‌ನಲ್ಲಿ ಕಳಸದ ವೊಡಾಫೋನ್ ಮೊಬೈಲ್ ಟವರ್ (55 ಸಾವಿರ ಮೌಲ್ಯದ 24 ಬ್ಯಾಟರಿ), ಬಸವನಹಳ್ಳಿ ಠಾಣಾ ವ್ಯಾಪ್ತಿಯ ಟಾಟಾ ಇಂಡಿಕಾಂ ಟವರ್ (23 ಸಾವಿರ ಬೆಲೆಯ 20 ಬ್ಯಾಟರಿ), ಬಪ್ಪುಂಜಿ ಬಿಎಸ್‌ಎನ್‌ಎಲ್ ಟವರ್ (10 ಸಾವಿರ ಬೆಲೆಯದು) ಮತ್ತು ಪುರಭವನದಿಂದ ಕಳವು ಮಾಡಿದ್ದ ಬ್ಯಾಟರಿಗಳು ಮತ್ತು ಸೋಲಾರ್ ದೀಪ ಹಾಗೂ ಕಡಬಗೆರೆ ಏರ್‌ಟೆಲ್ ಟವರ್‌ನಿಂದ ಹೊತ್ತೊಯ್ದಿದ್ದ 210 ಲೀ. ಡೀಸೆಲ್ ವಶಪಡಿಸಿಕೊಳ್ಳಲಾಗಿದೆ.

ಶೃಂಗೇರಿ ತಾಲ್ಲೂಕಿನ ನಲ್ಲೂರು, ದರೆಕೊಪ್ಪ, ಹೊನ್ನವಳ್ಳಿ ಸರ್ಕಾರಿ ಶಾಲೆಯ ಕಂಪ್ಯೂಟರ್, ಎಲ್‌ಪಿಜಿ ಸಿಲಿಂಡರ್, ಖಾದ್ಯತೈಲ ಕದ್ದಿದ್ದ,   ಶಿವಮೊಗ್ಗದ ದೊಡ್ಡಪೇಟೆಯಲ್ಲಿ ಮತ್ತು ಹೋಂಗಾರ್ಡ್ ಶ್ರೀದೇವಿ ಎಂಬವರ ಚಿನ್ನದ ಸರ ದೋಚಿದ್ದ ನವಲೆಯ ರಾಘು, ಮಧು ಮತ್ತು ಚೌಡನನ್ನು ಬಂಧಿಸಲಾಗಿದೆ. ಪ್ರದೀಪ, ಸಂಗ ತಲೆಮರೆಸಿ       ಕೊಂಡಿದ್ದಾರೆ.

ಪೊಲೀಸ್ ಇನ್‌ಸ್ಟೆಕ್ಟರ್‌ಗಳಾದ ಸದಾನಂದ ತಿಪ್ಪಣ್ಣವರ್, ಡಿ.ಟಿ.ಪ್ರಭು, ಸಂಜೀವ ನಾಯಕ್, ಕಳಸ, ಶೃಂಗೇರಿ, ಜಯಪುರ ಠಾಣೆ ಅಧಿಕಾರಿಗಳಾದ ಸಚಿನ್, ರಾಘವೇಂದ್ರ, ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಜಯಕರ,   ಗಂಗಶೆಟ್ಟಿ, ರವಿಶಂಕರ,      ಲೋಕೇಶ್ ನಾಯಕ್, ದೇವರಾಜ್, ಚಂದ್ರಶೇಖರ್, ಮುರುಳಿ,      ಕುಮಾರಸ್ವಾಮಿ,   ಸತ್ಯನಾರಾಯಣ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT