ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಜೋಡಿಗಳ ನಗ್ನ ಲಗ್ನ!

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

 ಕಿಂಗ್‌ಸ್ಟನ್ (ಜಮೈಕಾ) (ಎಪಿ):   ಜಮೈಕಾದ ಪಶ್ಚಿಮ ಭಾಗದಲ್ಲಿರುವ ನೆಗ್ರಿಲ್ ದ್ವೀಪದ ಕಡಲ ಕಿನಾರೆಯಲ್ಲಿ ವಸ್ತ್ರಗಳ ಬಂಧನದಿಂದ ಮುಕ್ತರಾದ ಒಂಬತ್ತು ಜೋಡಿಗಳು ಸೂರ್ಯ ಸಾಕ್ಷಿಯಾಗಿ ಬುಧವಾರ ವಿವಾಹ ಬಂಧನಕ್ಕೆ ಒಳಗಾದರು.

`ಪ್ರೇಮಿಗಳ ದಿನ~ದ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸೆಳೆಯಲು ಇಲ್ಲಿನ ರೆಸಾರ್ಟ್‌ಗಳು `ನಗ್ನ ಮದುವೆ~ ಸ್ಪರ್ಧೆಯನ್ನು ಆಯೋಜಿಸಿದ್ದವು. ಜೊತೆಗೆ ನಾಲ್ಕು ರಾತ್ರಿ ಉಚಿತ ವಾಸ್ತವ್ಯದ ಕೊಡುಗೆ ನೀಡುವುದಾಗಿಯೂ ಪ್ರಚಾರ ಮಾಡಿದ್ದವು.

ಈ ಪ್ರಚಾರಕ್ಕೆ ಮನಸೋತ ಅಮೆರಿಕ ಮತ್ತು ಕೆನಡಾದ ನೂರಕ್ಕೂ ಹೆಚ್ಚು ಜೋಡಿಗಳು ಇಲ್ಲಿಗೆ ಲಗ್ಗೆ ಇಟ್ಟವು. ಆದರೆ, 10 ಜೋಡಿಗಳನ್ನು ಮಾತ್ರ ಈ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
 
ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಜೋಡಿ ಮುಹೂರ್ತದ ಹಿಂದಿನ ದಿನ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.
 
`ಇದೊಂದು ಸುಂದರ ಅನುಭವ, ಯಕ್ಷಲೋಕದಂತೆಯೇ ಇತ್ತು~ ಎಂಬುದು ನ್ಯೂಜೆರ್ಸಿಯಿಂದ ಆಗಮಿಸಿದ್ದ 39ರ ಹರೆಯದ ಮಿಲ್ಲಿ ಸಾಲ್ಸ್ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT