ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳಲ್ಲಿ 69 ಹುಲಿಗಳ ಸಾವು

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್):  `ದೇಶದಲ್ಲಿ ಕಳೆದ 9 ತಿಂಗಳಿನಲ್ಲಿ ಕನಿಷ್ಠ 69 ಹುಲಿಗಳು ಸಾವನ್ನಪ್ಪಿವೆ~ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶುಕ್ರವಾರ ತಿಳಿಸಿದೆ.

`ಜನವರಿಯಿಂದ ಸೆಪ್ಟೆಂಬರ್‌ವರೆಗೆ  ದೇಶದ 41 ಹುಲಿ ಧಾಮಗಳಲ್ಲಿ ಕನಿಷ್ಠ 69 ಹುಲಿಗಳು ಮೃತಪಟ್ಟಿವೆ. ಇವುಗಳಲ್ಲಿ 41 ಹುಲಿಗಳು ಕಳ್ಳಬೇಟೆಗೆ ಹಾಗೂ 28 ಹುಲಿಗಳು  ಅಪಘಾತಕ್ಕೆ ಬಲಿಯಾಗಿವೆ~ ಎಂದು ಎನ್‌ಟಿಸಿಎ ಸಹಾಯಕ ಎಐಜಿ ರಾಜೀವ್ ಶರ್ಮ  ತಿಳಿಸಿದ್ದಾರೆ.

ಉತ್ತರಾಖಂಡ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಮೃತಪಟ್ಟಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಇದೀಗ ಕೇವಲ 1,706 ಹುಲಿಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT