ಭಾನುವಾರ, ಮಾರ್ಚ್ 7, 2021
20 °C

90ಕೆ.ಜಿ. ಈ ಪೇಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

90ಕೆ.ಜಿ. ಈ ಪೇಟ

ಸಿಖ್ಖ್ ಸಮುದಾಯದವರು ಪೇಟ ಧರಿಸುವುದು ಮಾಮೂಲು. ಆದರೆ ಪಟಿಯಾಲದ ಈ ಪೇಟ ತೊಟ್ಟ ವ್ಯಕ್ತಿಯನ್ನು ಕಂಡಾಗ ಈತನ ತಲೆ ಎಷ್ಟು ಗಟ್ಟಿ ಇರಬಹುದಪ್ಪಾ – ಎಂಬ ಆಲೋಚನೆ ಮೂಡುವುದಂತೂ ಸುಳ್ಳಲ್ಲ.ಅರವತ್ತೊಂದು ವರ್ಷದ ಇವರ ಹೆಸರು ಅವತಾರ್‌ ಸಿಂಗ್‌ ಮೌನಿ. 90 ಕೆ.ಜಿ. ತೂಕವಿರುವ ಈ ಪೇಟವನ್ನು ಧರಿಸಲು ಇವರಿಗೆ ಆರು ಗಂಟೆ ಬೇಕಂತೆ. ಹಾಗಾಗಿ ವಾರಕ್ಕೊಮ್ಮೆ ಪೇಟವನ್ನು ಬಿಚ್ಚಿ ಮತ್ತೊಮ್ಮೆ ಸುತ್ತುತ್ತಾರೆ.  ಪೇಟದ ಸುತ್ತಲೂ ಸ್ಟೀಲಿನ ತ್ರಿಷೂಲ ಮತ್ತು ಬಳ್ಳೆಗಳಿವೆ.ಇಷ್ಟು ದೊಡ್ಡ ಪೇಟವನ್ನು ಹೊತ್ತು ಓಡಾಡುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಕಷ್ಟವಾದರೂ, ಇಷ್ಟಪಟ್ಟ ಪೇಟವನ್ನು ತಲೆಯಿಂದ ಇಳಿಸುವುದು ಇವರಿಗೆ ಸಾಧ್ಯವಿಲ್ಲವಂತೆ. ಈ ಪೇಟದಿಂದಾಗಿ ಇವರು ಕಾರಿನಲ್ಲಿ ಹೋಗುವುದು ಸಾಧ್ಯವಾಗುತ್ತಿಲ್ಲವಂತೆ. ಕಾರಿನೊಳಗೆ ಇಷ್ಟು ದೊಡ್ಡ ಪೇಟವನ್ನು ಹೊತ್ತು ಕಾರಿನೊಳಗೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿ ನಾನು ಎಷ್ಟೇ ದೂರ ಹೋಗಬೇಕಾದರು ಬೈಕ್‌ನಲ್ಲಿಯೇ ತೆರಳುತ್ತೇನೆ.ನೆಂಟರಿಷ್ಟರ ಮನೆಗೆ ಹೋಗುವುದು ಕಷ್ಟವಾಗುತ್ತದೆ.  ನಮ್ಮನೆಯ ಬಾಗಿಲನ್ನು ಪೇಟ ನುಗ್ಗುವ ಗಾತ್ರಕ್ಕೆ ಅಗಲ ಮಾಡಿಸಿದ್ದೇನೆ  ಎನ್ನುತ್ತಾರೆ ಅವತಾರ್‌ ಸಿಂಗ್‌.ಇಷ್ಟು ದೊಡ್ಡ ಪೇಟ ಧರಿಸಿರುವುದರಿಂದಲೇ ನನಗೆ ಜನರು ಗೌರವ ಕೊಡುತ್ತಾರೆ. ಎಲ್ಲಿ ಹೋದರು ನಾನು ಇತರರಿಗಿಂತ ಆಕರ್ಷಕವಾಗಿ ಕಾಣುತ್ತೇನೆ. ನನ್ನ ಗಾಡಿ ನಿಲ್ಲಿಸಲು ಮತ್ತು ಪ್ರಾರಂಭ ಮಾಡಲು ಪ್ರತಿಯೊಬ್ಬರು ಸಹಾಯ ಮಾಡುತ್ತಾರೆ ಎಂದು ಸಂತಸ ಹಂಚಿಕೊಳ್ಳುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.