ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

904 ಕೋಟಿ ಜಿಲ್ಲಾ ಸಾಲ ಯೋಜನೆ ಬಿಡುಗಡೆ

Last Updated 25 ಮಾರ್ಚ್ 2011, 8:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ 2011-12ನೇ ಸಾಲಿಗೆ ್ಙ 904.88 ಕೋಟಿ ಮೊತ್ತದ ಜಿಲ್ಲಾ ಸಾಲ ಯೋಜನೆಯನ್ನು ಪ್ರಕಟಿಸಿದ್ದು, ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರದ ಕೆನರಾ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧ ಸಾಲ ಯೋಜನೆಗಳ ಕೈಪಿಡಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಂಗೇಗೌಡ ಬಿಡುಗಡೆಗೊಳಿಸಿದರು.

ಆದ್ಯತಾ ವಲಯಕ್ಕೆ ್ಙ 787.86 ಕೋಟಿ (ಶೇ.87) ಹಾಗೂ ಇತರೆ ವಲಯಕ್ಕೆ ್ಙ 117 ಕೋಟಿ  (ಶೇ.13) ನಿಗದಿಪಡಿಸಲಾಗಿದೆ. ಆದ್ಯತಾ ವಲಯಕ್ಕೆ 2009-10ರಲ್ಲಿ ್ಙ 573.60 ಕೋಟಿ, 2010-11ಕ್ಕೆ ್ಙ 690.74 ಕೋಟಿ ನಿಗದಿಪಡಿಸಲಾಗಿದೆ. ಈ ಮೂಲಕ 2010-11ಕ್ಕೆ ಆದ್ಯತಾ ವಲಯಕ್ಕೆ ್ಙ 117.14 ಕೋಟಿ ಹೆಚ್ಚಳ ಮಾಡಿದ್ದರೆ, ಈ ಬಾರಿ ್ಙ 97.12 ಕೋಟಿ ಹೆಚ್ಚಾಗಿದೆ.

ಆದ್ಯತಾ ವಲಯದ ್ಙ 787.86 ಕೋಟಿಯಲ್ಲಿ  ಕೃಷಿ ವಲಯಕ್ಕೆ ್ಙ 557.09 ಕೋಟಿ (ಶೇ. 71ರಷ್ಟು) ಹಾಗೂ ಕೃಷಿಯೇತರ ವಲಯಕ್ಕೆ ್ಙ 41.58 ಕೋಟಿ (ಶೇ.5ರಷ್ಟು) ಮತ್ತು ಇತರೆ ವಲಯಗಳಿಗೆ ್ಙ 189.20 ಕೋಟಿ. (ಶೇ. 24ರಷ್ಟು) ಹಣವನ್ನು ಈ ಸಾಲಿನಲ್ಲಿ ನಿಗದಿಪಡಿಸಲಾಗಿದೆ.

ತಾಲ್ಲೂಕುವಾರು ವಿವರ: ಸಾಲ ಯೋಜನೆಯ ಆದ್ಯತಾ ವಲಯದಲ್ಲಿ ಈ ಬಾರಿಯೂ ಮೊಳಕಾಲ್ಮುರು ತಾಲ್ಲೂಕನ್ನು ನಿರ್ಲಕ್ಷಿಸಲಾಗಿದೆ.ಆದ್ಯತಾ ವಲಯದಲ್ಲಿ ಚಳ್ಳಕೆರೆ ತಾಲ್ಲೂಕಿಗೆ ್ಙ 129.2 ಕೋಟಿ ನಿಗದಿಪಡಿಸುವ ಮೂಲಕ ಶೇ. 16ರಷ್ಟು ಪಾಲು ಪಡೆದಿದೆ. ಚಿತ್ರದುರ್ಗ ತಾಲ್ಲೂಕಿಗೆ ್ಙ 234.10 ಕೋಟಿ  ನಿಗದಿಪಡಿಸುವ ಮೂಲಕ ಅತಿ ಹೆಚ್ಚಿನ ಶೇ.30ರಷ್ಟು ಪಾಲು ದೊರೆತಿದೆ. ಹಿರಿಯೂರು ತಾಲ್ಲೂಕಿಗೆ ್ಙ 120.48 ಕೋಟಿ ನಿಗದಿಪಡಿಸುವ ಮೂಲಕ ಶೇ.15, ಹೊಳಲ್ಕೆರೆ ತಾಲ್ಲೂಕಿಗೆ ್ಙ 131.47 ಕೋಟಿ ನಿಗದಿಯಾಗಿದ್ದು, ಶೇ.17ರಷ್ಟು ಪಾಲು ಪಡೆದಿದೆ. ಹೊಸದುರ್ಗ ತಾಲ್ಲೂಕು ್ಙ 117.17 ಕೋಟಿ ನಿಗದಿಯಾಗಿದ್ದು, ಶೇ.15ರಷ್ಟು ಪಾಲು ಪಡೆದಿದೆ. ಮೊಳಕಾಲ್ಮುರು ತಾಲ್ಲೂಕಿಗೆ ್ಙ 55.39 ಕೋಟಿ ನಿಗದಿಯಾಗಿದ್ದು, ಶೇ. 7ರಷ್ಟು ಪಾಲು ನೀಡಲಾಗಿದೆ.

ಆದ್ಯತಾ ವಲಯದ ್ಙ 787.86 ಕೋಟಿ  ಕೃಷಿ, ಕೃಷಿಯೇತರ ಹಾಗೂ ಇತರೆ ವಲಯಗಳಿಗೆ ಜಿಲ್ಲೆಯ 142 ಬ್ಯಾಂಕ್‌ಗಳ ಮೂಲಕ ಸಾಲ ನೀಡಲಾಗುತ್ತದೆ. ಪ್ರಗತಿ ಗ್ರಾಮೀಣ ಬ್ಯಾಂಕ್ 65 ಶಾಖೆಗಳ ಮೂಲಕ ಸಾಲ ವಿತರಿಸಲಾಗುತ್ತಿದೆ.

ಸಾಲ ಯೋಜನೆ ವಿತರಿಸಿ ಬಿಡುಗಡೆ ಮಾತನಾಡಿದ ಸಿಇಒ ರಂಗೇಗೌಡ,  ಬ್ಯಾಂಕ್‌ಗಳು ನಿಗದಿಪಡಿಸಿದ ಗುರಿ ಮುಟ್ಟಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಜಿ.ಎಚ್. ರಾವ್, ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಮೊಕಾಶಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹಾಯಕ ಮಹಾ ಪ್ರಬಂಧಕ ನಂಜುಂಡರಾವ್, ಲೀಡ್ ಬ್ಯಾಂಕ್‌ನ ಆರ್.ಸಿ. ಪಾಟೀಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT