ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9/11 ಸ್ಮಾರಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್, (ಐಎಎನ್‌ಎಸ್): ಭಯೋತ್ಪಾದಕರ ದಾಳಿಯಲ್ಲಿ ನೆಲಸಮಗೊಂಡ ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿರುವ 9/11 ಸ್ಮಾರಕವನ್ನು ಸೋಮವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ದುರಂತ ಸಂಭವಿಸಿ ದಶಕ ಸಂದ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಸ್ಮಾರಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರಿಂದ ಜನಸಾಗರವೇ ಇಲ್ಲಿಗೆ ಹರಿದುಬಂತು.

ದುರಂತದಲ್ಲಿ ಮಡಿದವರನ್ನು ನೆನೆದು ಭಾವಪರವಶರಾದ ಅನೇಕರ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಸ್ಮಾರಕ ರಾಶಿ ರಾಶಿ ಹೂಗುಚ್ಛ ಹಾಗೂ ಸಂದೇಶಗಳಿಂದ ತುಂಬಿತ್ತು. ನ್ಯೂಯಾರ್ಕ್ ಮೇಯರ್ ಮೈಕಲ್ ಬ್ಲೂಮ್‌ಬರ್ಗ್ ಹಾಗೂ ಸಿಬ್ಬಂದಿ ಖುದ್ದಾಗಿ ಜನರನ್ನು ಬರಮಾಡಿಕೊಂಡರು.

ಹುಲ್ಲಿನ ಹಾಸಿಗೆ ಮತ್ತು ಮರಗಳಿಂದ ಕಂಗೊಳಿಸುತ್ತಿರುವ ಸ್ಮಾರಕದ ಸ್ಥಳದಲ್ಲಿ ಕೊಳಗಳನ್ನು ನಿರ್ಮಿಸಲಾಗಿದೆ. ದುರಂತದಲ್ಲಿ ಮಡಿದ 2,983 ಜನರ ಸ್ಮರಣಾರ್ಥ ಅವರ ಹೆರುಗಳನ್ನು ಕಂಚಿನ ಫಲಕಗಳಲ್ಲಿ ಕೆತ್ತಿ ಕೊಳಗಳ ಸುತ್ತ ನೇತು ಹಾಕಲಾಗಿದೆ.

ಪ್ರವೇಶ ಉಚಿತವಾಗಿದ್ದು ಮೊದಲ ದಿನ ಏಳು ಸಾವಿರ ಜನರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರು. ಮುಂದಿನ ತಿಂಗಳಿಗೆ ಸುಮಾರು ನಾಲ್ಕು ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT