ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

91ನೇ ವರ್ಷಕ್ಕೆ ಕಾಲಿಟ್ಟ ದಿಲೀಪ್ ಕುಮಾರ್

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಮೊಘಲ್-ಎ-ಆಜಂ', `ಗಂಗಾ ಜಮುನಾ', `ದೇವದಾಸ್' ಮತ್ತು `ಮಧುಮತಿ'ಯಂತಹ ಪ್ರಖ್ಯಾತ ಚಿತ್ರಗಳಲ್ಲಿ ನಾಯಕ ಪಾತ್ರ ವಹಿಸಿದ್ದ, ಬದುಕಿರುವಾಗಲೇ ಬಾಲಿವುಡ್‌ನ ದಂತಕತೆಯಾಗಿರುವ ದಿಲೀಪ್ ಕುಮಾರ್ ಮಂಗಳವಾರ  91ನೇ ವರ್ಷಕ್ಕೆ ಕಾಲಿಟ್ಟರು.

ಚಿತ್ರರಂಗದ ಪ್ರಮುಖ ವ್ಯಕ್ತಿಗಳು ಮತ್ತು ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ನಿಧನ ಹಿನ್ನೆಲೆಯಲ್ಲಿ ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು ಆಚರಿಸದಿರಲು ದಿಲೀಪ್ ನಿರ್ಧರಿಸಿದ್ದಾರೆ.ಬಾಲಿವುಡ್‌ನ ಪ್ರಮುಖರು ಮತ್ತು ಇತರ ಗಣ್ಯ ವ್ಯಕ್ತಿಗಳು ಈ ಸಂದರ್ಭದಲ್ಲಿ ದಿಲೀಪ್ ಅವರಿಗೆ ಶುಭ ಕೋರಿ `ಭಾರತೀಯ ಸಿನಿಮಾ ರಂಗದ ವಿವಾದಾತೀತ ದೊರೆ' ಎಂದು ಬಣ್ಣಿಸಿದ್ದಾರೆ.

`ಭಾರತೀಯ ಸಿನಿಮಾ ನಟರ ಇತಿಹಾಸವನ್ನು ಯುಸೂಫ್ ಸಾಹೇಬರನ್ನು ಬಿಟ್ಟು ಬರೆಯಲು ಸಾಧ್ಯವೇ ಇಲ್ಲ, ಇತ್ತೀಚೆಗೆ ಅವರ ಜತೆ ಒಂದು ಸುಂದರವಾದ ಸಂಜೆಯನ್ನು ಕಳೆದಿದ್ದೇನೆ' ಎಂದು ಅಮಿತಾಭ್ ಬಚ್ಚನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

`ನನ್ನ ದೃಷ್ಟಿಯಲ್ಲಿ ನೂರು ವರ್ಷಗಳ ಸಿನಿಮಾ ಇತಿಹಾಸದಲ್ಲಿ ದಿಲೀಪ್ ಸಾಹೇಬ್ ಅವರು ವಿವಾದಾತೀತ ದೊರೆ' ಎಂದು ತಿಳಿಸಿರುವ ಅನುಪಮ್ ಖೇರ್, ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.ದೂರವಾಣಿ ಮೂಲಕ ಸಂಪರ್ಕಿಸಿದ ಶಬನಾ ಅಜ್ಮಿ ಅವರು, `ನಿಮ್ಮಂತ ನಟರು ಮತ್ತೊಬ್ಬರಿಲ್ಲ; ನಿಮ್ಮ ನಟನಾ ಕೌಶಲ್ಯ ಮತ್ತು ಬದ್ಧತೆ ಇಂದಿಗೂ ಮಾದರಿ' ಎಂದು ತಿಳಿಸಿದ್ದಾರೆ.

`ದಿಲೀಪ್ ಕುಮಾರ್ ಎಂದರೆ ಘನತೆ, ಸೂಕ್ಷ್ಮತೆ, ಕಲಾ ಸೂಕ್ಷ್ಮತೆ, ಪ್ರೌಢತೆ' ಎಂದು ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಬಣ್ಣಿಸಿದ್ದಾರೆ.ಪಾಕಿಸ್ತಾನದ ಗಾಯಕ, ನಟ ಅಲಿ ಜಾಫರ್ ಸಹ ಸಂದೇಶ ಕಳುಹಿಸಿ `ದಿಲೀಪ್ ಅವರಿಗೆ ಮತ್ತು ಅವರ ಬದ್ಧತೆಗೆ ಸೆಲ್ಯೂಟ್' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT