ಸೋಮವಾರ, ಡಿಸೆಂಬರ್ 16, 2019
18 °C

92 ಜನರ ದಂತ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಇಲ್ಲಿನ ನಿಶ್ಚಿಂತ್ ಸೋಷಿಯಲ್ ವೆಲ್‌ಫೇರ್ ಟ್ರಸ್ಟ್, ಶ್ರೀಕೃಷ್ಣ ದೇವರಾಯ ದಂತವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಉಪನಗರ 4ನೇ ಹಂತದ ಯುನೈಟೆಡ್ ರೆಸಿಡೆಂಟ್ಸ್ ಅಸೋಸಿಯೇಶನ್ಸ್ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಈಚೆಗೆ ನಡೆಯಿತು.ಟ್ರಸ್ಟ್ ಅಧ್ಯಕ್ಷೆ ಪೂರ್ಣಿಮಾದಾಸ್ ಶಿಬಿರ ಉದ್ಘಾಟಿಸಿ, ಅಪಾರ್ಟ್‌ಮೆಂಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕೂಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ. ಉಚಿತವಾಗಿ ದಂತ ತಪಾಸಣೆ ನಡೆಸಿ, ಸ್ಥಳದಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಆಸ್ಪತ್ರೆಯ ದಂತವೈದ್ಯ ಡಾ.ಅನುಪಮ್ ಮೊಹಂತೆ ಮತ್ತು ಸಿಬ್ಬಂದಿ ಹಾಜರಿದ್ದರು. 92 ಮಂದಿ ಶಿಬಿರದ ಪ್ರಯೋಜನ ಪಡೆದರು.

ಪ್ರತಿಕ್ರಿಯಿಸಿ (+)