ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9,570 ಮಂದಿಗೆ ‘ದಸರಾ ದರ್ಶನ’ ಭಾಗ್ಯ

Last Updated 20 ಸೆಪ್ಟೆಂಬರ್ 2013, 10:24 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಗಾ್ರಮೀಣ ಮತ್ತು ಬಡತನ ರೇಖೆಗಿಂತ ಕೆಳಗಿರುವ 9,570 ಜನರಿಗೆ ದಸರಾ ದರ್ಶನದ ಭಾಗ್ಯ ಲಭಿಸಲಿದೆ.

ಗುರುವಾರ ದಸರಾ ದರ್ಶನ ಉಪಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸೆ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ (ಗ್ರಾಮೀಣ) ಬಿ. ವಿ. ಶ್ರೀನಿವಾಸ್, ‘ಅಕ್ಬೋಬರ್ 6ರಿಂದ 10ರವರೆಗೆ ದಸರಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳ 29 ತಾಲ್ಲೂಕುಗಳಿಂದ ಫಲಾನು­ಭವಿ­ಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಮೂರು ದಿನ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ 18 ತಾಲ್ಲೂಕು ಮತ್ತು 9 ಮತ್ತು 10ರಂದು ಉಳಿದ ಜಿಲ್ಲೆಗಳ 11 ತಾಲ್ಲೂಕುಗಳ ಜನರಿಗೆ ಅವಕಾಶ ನೀಡಲಾ­ಗುತ್ತದೆ’ ಎಂದರು.

‘ಆಯ್ಕೆಯಾಗಿರುವ ಫಲಾನು­ಭವಿ­ಗಳ ಪೈಕಿ ಶೇ 70ರಷ್ಟು ಮಹಿಳೆಯರು, ಮಕ್ಕಳು ಮತ್ತು ಶೇ 30ರಷ್ಟು ಪುರುಷರು ಇದ್ದಾರೆ. ತಲಾ 50 ರೂಪಾಯಿ ಪಡೆದು ದಸರಾ ದರ್ಶನಕ್ಕೆ ಅವಕಾಶ ಮಾಡಿಕೊಡ­ಲಾಗು­ತ್ತಿದೆ.  ಚಾಮುಂಡಿ ಬೆಟ್ಟ, ಅಂಬಾ­ವಿಲಾಸ ಅರಮನೆ, ಬೃಂದಾವನ ಉದ್ಯಾನ, ಶ್ರೀ ಚಾಮರಾಜೇಂದ್ರ ಪಾ್ರಣಿಶಾಸ್ತ್ರ ಉದ್ಯಾನ (ಮೃಗಾಲಯ) ಮತ್ತು ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಒಟ್ಟು 174 ಬಸ್ಸುಗಳನ್ನು ಈ ಕಾರ್ಯಕ್ಕಾಗಿ ಅನುವುಗೊಳಿಸಲಾಗಿದೆ. ಒಟ್ಟು 31.49 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲಾಗುತಿ್ತದೆ. ಇದರಲ್ಲಿ  26 ಲಕ್ಷ ರೂಪಾಯಿಯು 174 ಬಸ್ಸುಗಳಿಗೆ, ಮೃಗಾಲಯ ಪ್ರವೇಶಕ್ಕೆ 3.84 ಲಕ್ಷ ವೆಚ್ಚ ತಗುಲುವುದು. ಉಳಿದಂತೆ ಪ್ರಚಾರ ಸಾಮಗ್ರಿ, ಗುರುತಿನ ಪತ್ರ, ವಿಡಿಯೋಗ್ರಾಫ್, ಫೋಟೋಗ್ರಾಫ್ ಶುಲ್ಕಗಳು, ಕುಡಿಯುವ ನೀರು ಒದಗಿಸಲು ಖರ್ಚಾಗಲಿದೆ.

ದೂರದ ಗಾ್ರಮಗಳಿಂದ ನಸುಕಿನ 5 ಗಂಟೆಗೆ ಮತ್ತು ಸಮೀಪದ ಊರುಗಳಿಂದ ಬೆಳಿಗ್ಗೆ 7 ಗಂಟೆಗೆ ಜನರನ್ನು ಹತ್ತಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10  ಗಂಟೆಗೆ ಮರಳಿ ಅವರ ಸ್ಥಳಗಳಿಗೆ ತಲುಪಿಸಲಾಗುವುದು’ ಎಂದು ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಬಿ.ವಿ. ಶ್ರೀನಿವಾಸ ತಿಳಿಸಿದರು.

ಉಪಸಮಿತಿಯ ಅಧ್ಯಕ್ಷ ಆರ್. ಎಂ. ರಾಜಪ್ಪ, ‘ಇನೂ್ನ ಹೆಚ್ಚುವರಿ ಅನುದಾನವಾಗಿ 10 ಲಕ್ಷ ರೂಪಾಯಿಯನ್ನು ಸರ್ಕಾರವು ನಮ್ಮ ಸಮಿತಿಗೆ ನೀಡಬೇಕು. ಇದರಿಂದ ಇನ್ನೂ ಹೆಚ್ಚಿನ ಸೌಕರ್ಯ ನೀಡಲು ಸಾಧ್ಯವಾಗುತ್ತದೆ’  ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT