ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿತ ಪುಸ್ತಕ ಪುರಸ್ಕಾರ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಾಕಷ್ಟು ಕೃತಿಗಳನ್ನು ಪ್ರಕಟಿಸಿರುವ ಮನೋಹರ ಗ್ರಂಥಮಾಲಾ ಪ್ರಕಾಶನವು ತನ್ನ ಪರಂಪರೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ~ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮನೋಹರ ಗ್ರಂಥಮಾಲಾ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಯ `ಅಂಕಿತ ಪುಸ್ತಕ~ ಪುರಸ್ಕಾರ ನೀಡಿ ಅವರು ಮಾತನಾಡಿದರು.

`ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಮಾಲಾರ್ಪಣೆ ಮಾಡುವ ಬದಲಿಗೆ ಉತ್ತಮ ಕೃತಿನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಇತರೆ ಇಲಾಖೆಗಳು ಇದನ್ನೇ ಅನುಸರಿಸಿದರೆ ಸಾಹಿತ್ಯದ ಪ್ರಸಾರಕ್ಕೆ ಅನುಕೂಲವಾಗಲಿದೆ~ ಎಂದರು.

ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಶ್ರೀನಿವಾಸ ವೈದ್ಯ, `ಮನೋಹರ ಗ್ರಂಥಮಾಲಾ ಪ್ರಕಾಶನವನ್ನು ಜ್ಞಾನಪೀಠದ ಕಾರ್ಖಾನೆ ಎಂದರೆ ಅತಿಶಯೋಕ್ತಿ ಎನಿಸದು~ ಎಂದರು.ಅಂಕಿತ ಪುಸ್ತಕದ ವ್ಯವಸ್ಥಾಪಕ ಪ್ರಕಾಶ್ ಕಂಬತ್ತಳ್ಳಿ, `ಸಾಹಿತ್ಯ ಪ್ರಸಾರದಲ್ಲಿ ಪ್ರಕಾಶನ ಸಂಸ್ಥೆಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಹಾಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಪ್ರಕಾಶನ ವಿಭಾಗವನ್ನು ಪರಿಗಣಿಸಬೇಕು~ ಎಂದು ಕೋರಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್‌ಮಾತನಾಡಿದರು. ಮನೋಹರ ಗ್ರಂಥಮಾಲಾ ಪ್ರಕಾಶನದ ಮುಖ್ಯಸ್ಥ ರಮಾಕಾಂತ ಜೋಷಿ ಅವರಿಗೆ 15 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT