ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಆಹಾರ ಕಳಪೆ

Last Updated 15 ಅಕ್ಟೋಬರ್ 2012, 10:45 IST
ಅಕ್ಷರ ಗಾತ್ರ

ಭದ್ರಾವತಿ: ಜಿನುಗಿ ವಾಸನೆ ಬರುತ್ತಿರುವ ಬೆಲ್ಲ, ಹೊಟ್ಟು ತುಂಬಿದ ಗೋಧಿ, ರವೆ, ಮಣ್ಣು ತುಂಬಿರುವ ಖಾರದಪುಡಿ...

- ಹೀಗೆ ಅಂಗನವಾಡಿ ಕೇಂದ್ರಕ್ಕೆ ಸರಬರಾಜಾಗಿರುವ ಎಲ್ಲಾ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಎಐಟಿಯುಸಿ ಬೆಂಬಲಿತ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಸುಶೀಲಾಬಾಯಿ ವಸ್ತುಗಳ ಸಮೇತ ಹಾಜರಾಗಿ ಆರೋಪ ಮಾಡಿದ್ದು, ಈ ಕುರಿತಂತೆ ಅಧಿಕಾರಿಗಳ ಗಮನಕ್ಕೆ ವಿಷಯ ತಿಳಿಸಿರುವುದಾಗಿ ಹೇಳಿದರು.

ಎಂಎನ್‌ಎಲ್‌ಸಿ ಮುದ್ರೆಯೊಂದಿಗೆ ಬರುವ ಅಕ್ಕಿ, ಹೆಸರು ಕಾಳು ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. ಆದರೆ, ಯಾವುದೇ ಮುದ್ರೆ ಇಲ್ಲದೇ ಬರುವ ಇನ್ನಿತರ ವಸ್ತುಗಳು ಕಳೆಪೆಯಾಗಿದೆ ಎಂಬುದು ಅವರ ಆರೋಪ.
ಈ ಕುರಿತು ಉತ್ತಮ ವಸ್ತುಗಳನ್ನು ನೀಡುವಲ್ಲಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದು, ಅದಕ್ಕೆ ನಾಗರಿಕ ವೇದಿಕೆ ಅಜಯ್ ಸಹ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT