ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಕಲ್ಯಾಣ: ಪ್ರಶಸ್ತಿ ಪ್ರಕಟ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರ ಹಿತರಕ್ಷಣೆಗೆ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಹಾಗೂ ವ್ಯಕ್ತಿಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

`ವಿಶ್ವ ಅಂಗವಿಕಲರ ದಿನಾಚರಣೆ' ಅಂಗವಾಗಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದು, 2012ನೇ ಸಾಲಿನ ಪ್ರಶಸ್ತಿಗೆ ಈ ಕೆಳಕಂಡ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಜಯವಿಭವ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ವಿವರಿಸಿದರು.

ಸ್ವಯಂ ಸೇವಾ ಸಂಸ್ಥೆಗೆ ತಲಾ ರೂ 25,000, ವಿಶೇಷ ಶಿಕ್ಷಕರು ಮತ್ತು ವ್ಯಕ್ತಿಗಳಿಗೆ ತಲಾ ರೂ 10,000 ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುವುದು. ರಾಜ್ಯದ ಎಲ್ಲಾ ಭಾಗಗಳಿಂದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಅದರಲ್ಲಿ ಸ್ವಯಂ ಸೇವಾ ಸಂಸ್ಥೆ ಮತ್ತು ವಿಶೇಷ ಶಿಕ್ಷಕರ ವಿಭಾಗಕ್ಕೆ ತಲಾ 11 ಮತ್ತು ವೈಯಕ್ತಿಕ ವಿಭಾಗಕ್ಕೆ 27 ಅರ್ಜಿಗಳು ಬಂದಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 5 ಸಂಸ್ಥೆಗಳು, 3 ವಿಶೇಷ ಶಿಕ್ಷಕರು ಹಾಗೂ 8 ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ಈ ತಿಂಗಳ 3ರಂದು ನಡೆಯುವ `ವಿಶ್ವ ಅಂಗವಿಕಲರ ದಿನಾಚರಣೆ' ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವ ಕಾರ್ಯಕ್ರಮ ಇತ್ತು. ಆದರೆ, ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ನಿಧನದ ಹಿನ್ನೆಲೆಯಲ್ಲಿ ಇದೇ 6ರವರೆಗೆ ಶೋಕಾಚರಣೆ ಇದೆ. ಈ ಹಿನ್ನೆಲೆಯಲ್ಲಿ ಡಿ.3ರ ಕಾರ್ಯಕ್ರಮ ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದರು.

`ಇಲಾಖೆ ಅಂಗವಿಕಲತೆಯಿಂದ ಬಳಲುತ್ತಿದೆ'
`ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೇ ಅಂಗವಿಕಲತೆಯಿಂದ ಬಳಲುತ್ತಿದ್ದು, ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ' ಎಂದು ಜಯವಿಭವ ಸ್ವಾಮಿ ಹೇಳಿದರು. `50 ಮಂದಿ ಬಂದರೆ ಕೂರಲು ಸ್ಥಳಾವಕಾಶವಿಲ್ಲ. ಮಹಿಳಾ ಸಿಬ್ಬಂದಿ ಇದ್ದಾರೆ. ಆದರೆ, ಅವರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಸಿಬ್ಬಂದಿಯ ಕಾರ್ಯನಿರ್ವಹಣೆಯೂ ಆಮೆ ವೇಗದಲ್ಲಿದೆ. ಇಲ್ಲಿ ಹಾಕಿರುವ ಬೋರ್ಡ್‌ನಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ನಿರ್ದೇಶಕರು ಯಾರಾದರೂ ಕಾಣಸಿಗುತ್ತಾರೆಯೇ? ನೀವೇ ನೋಡಿ' ಎಂದು ಸಲಹೆ ಮಾಡಿದರು.


ಅತ್ಯುತ್ತಮ ಸಂಸ್ಥೆ

-ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ, ಬೆಂಗಳೂರು
-ಓಂಕಾರ ಸತ್ಯಸಾಯಿ ಸೇವಾ ಟ್ರಸ್ಟ್, ಬೆಂಗಳೂರು
-ಚಶೈರ್ ಹೋಮ್ಸ ಆಫ್ ಇಂಡಿಯಾ, ಪಾಲಿಬೆಟ್ಟ, ಕೊಡಗು ಜಿಲ್ಲೆ
-ದ್ಯಾ ಇ-ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
-ಶಾದೀಪ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರ, ಮುಧೋಳ

ವಿಶೇಷ ಶಿಕ್ಷಕರು
-ರೀನಾ ವೀತಾ ಡಿಸೋಜಾ, ಬೈಂದೂರು (ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ)
-ಎಲ್.ಎಂ.ತಳಬಾಳ, ರೋಣ ತಾಲ್ಲೂಕು (ಶ್ರವಣ ದೋಷವುಳ್ಳ ಮಕ್ಕಳ ವಿಶೇಷ ಶಾಲೆ)
-ಕಳಕಪ್ಪ ವೀರಪ್ಪ ಮುದ್ಲಾಪುರ, ಗದಗ (ಪಂಡಿತ ಪಂಚಾಕ್ಷರಿ ಗವಾಯಿ ಅವರ ಅಂಧರ ವಸತಿಯುತ ವಿಶೇಷ ಸಂಗೀತ ಶಾಲೆ)


ವೈಯಕ್ತಿಕ ಪ್ರಶಸ್ತಿ

-ಎಚ್.ಎನ್.ಗಿರೀಶ್, ಅರಕಲಗೂಡು ತಾಲ್ಲೂಕು
-ರಜನಿ ಗೋಪಾಲಕೃಷ್ಣ, ಬೆಂಗಳೂರು
-ಮಾರುತಿ ಮಾಸ್ತಿ ಮೊಗೇರ, ಬೆಂಗಳೂರು
-ಬಸವರಾಜ, ಅಫಜಲಪುರ ತಾಲ್ಲೂಕು
-ಎಸ್.ಆರ್.ಅಂಬುಜಾ, ಬೆಂಗಳೂರು
-ಶಿವಪ್ಪ ಪರಪ್ಪ ಅಣಗೌಡರ, ರೋಣ ತಾಲ್ಲೂಕು
-ಚಂದ್ರಶೇಖರ ಪುಟ್ಟಪ್ಪ, ಮಳವಳ್ಳಿ ತಾಲ್ಲೂಕು
-ಬಂದೇನವಾಜ ಪೀರಸಾಬ ವಾಲೀಕಾರ, ಬಸವನಬಾಗೇವಾಡಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT