ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಬಸ್ ಪಾಸ್ ನವೀಕರಣ

Last Updated 2 ಜನವರಿ 2014, 9:46 IST
ಅಕ್ಷರ ಗಾತ್ರ

ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2014ನೇ ಸಾಲಿಗೆ ಅಂಗವಿಕಲರಿಗೆ ರಿಯಾಯಿತಿ ದರದ ಬಸ್ ಪಾಸ್‌ ಅನ್ನು ನವೀಕರಿ­ಸಲು ಫೆಬ್ರುವರಿ 28 ವರೆಗೆ ಅವಕಾಶ ಕಲ್ಪಿಸಲಾಗಿದೆ. 2013ರಲ್ಲಿ ಪಡೆದ ಪಾಸುಗಳನ್ನು ನವೀಕರಿಸಿಕೊಳ್ಳುವ ಕೊನೆಯ ದಿನ ಫೆಬ್ರವರಿ 28ರ ವರೆಗೂ ಬಳಸಲು ಅವಕಾಶ ನೀಡಲಾಗಿದೆ ಎಂದು ವಿಭಾ­ಗೀಯ ನಿಯಂತ್ರಣಾಧಿಕಾರಿ ತಿಳಿಸಿ­ದ್ದಾರೆ.

ಪ್ರತಿ ತಾಲ್ಲೂಕಿನ ಹತ್ತಿರದ ಬಸ್ ಘಟಕ­ಗಳಲ್ಲಿ ನವೀಕರಣದ ಶುಲ್ಕ ₨ 660 ಮತ್ತು ಹಳೆಯ ಪಾಸ್‌ ಅನ್ನು ಹಿಂದಿರುಗಿಸಿ ಉದ್ಯೋಗದ ವಿವರ ಮತ್ತು ಇತ್ತೀಚಿನ ಎರಡು ಭಾವಚಿತ್ರ­ ನೀಡಿ ಪಾಸ್‌ ನವೀಕರಿಸಿ­ಕೊಳ್ಳ­ಬಹು­ದು. ಹೊಸದಾಗಿ 2014ನೇ ಸಾಲಿಗೆ ಅಂಗವಿಕಲರು ರಿಯಾಯಿತಿ ದರದ ಬಸ್ ಪಾಸ್ ಪಡೆದುಕೊಳ್ಳಲು ಅಂಗ­ವಿಕ­ಲರ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ­ರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ, ರಹವಾಸಿ ಪ್ರಮಾಣ ಪತ್ರ, ಇತ್ತೀ­ಚಿನ 3 ಭಾವಚಿತ್ರಗಳು, ಪಾಸ್ ಶುಲ್ಕ ₨ 660 ಅನ್ನು ಪ್ರತಿ ಶುಕ್ರವಾರ ಮತ್ತು ಮಂಗಳವಾರ­ ಸಂಸ್ಥೆಯ ವಿಭಾ­ಗೀಯ ಕಚೇರಿ, ನವನಗರ, ಬಾಗಲಕೋಟೆ­ಯಲ್ಲಿ ಸಲ್ಲಿಸಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT