ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗಾಗಿ ಬ್ಯಾಟರಿಸಹಿತ ತ್ರಿಚಕ್ರ ಸೈಕಲ್

Last Updated 4 ಜುಲೈ 2013, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ  ಬಿಎಂಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಅಂಗವಿಕಲರಿಗಾಗಿ ಬ್ಯಾಟರಿಸಹಿತ ತ್ರಿಚಕ್ರ ಸೈಕಲ್‌ಗಳನ್ನು ಅವಿಷ್ಕರಿಸಿದ್ದಾರೆ. ಕೈಚಾಲಿತ ತ್ರಿಚಕ್ರ ಸೈಕಲ್‌ಗೆ ಬ್ಯಾಟರಿ ಹಾಗೂ ನಿಯಂತ್ರಕವನ್ನು ಅಳವಡಿಸಿರುವುದರಿಂದ ಅಂಗವಿಕಲರು ಈ ಹೊಸ ಸೈಕಲ್ ಅನ್ನು ಸುಲಭವಾಗಿ ಉಪಯೋಗಿಸಬಹುದು.

ಈ ಸೈಕಲ್ ಬಳಕೆಯಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚಿನ ದೂರವನ್ನು ಸುಲಭವಾಗಿ ಕ್ರಮಿಸಲು ಸಾಧ್ಯವಿದೆ. ಇದರಿಂದ ಅಂಗವಿಕಲರು ಯಾವುದೇ ಅಳುಕಿಲ್ಲದೇ ಈ ಸುಧಾರಿತ ವಾಹವನ್ನು ಬಳಸಬಹುದು.

ಈ ಬಗ್ಗೆ ಯೋಜನೆಯ ಮುಖ್ಯಸ್ಥ ಪ್ರೊ.ಬಿ.ರಮೇಶ್ ನಾಯಕ್, `ತ್ರಿಚಕ್ರ ಸೈಕಲ್‌ಗೆ ಬಳಸಿರುವ ಬ್ಯಾಟರಿ ಹಾಗೂ ಮೋಟಾರ್ ನಿಯಂತ್ರಣ ಉಪಕರಣಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಉಪಯೋಗಿಸಿಕೊಂಡು ಬ್ಯಾಟರಿ ಚಾಲಿತ ಸೈಕಲ್‌ಗಳನ್ನು ಉತ್ಪಾದಿಸಬಹುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT